ಪಾವಗಡ

ಬಿಜೆಪಿಯ ದುರಾಡಳಿತದ ವಿರುದ್ಧ ನಾವು ಹೋರಾಟ ಮಾಡಿ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ನೀಡಿರುವ ಭರವಸೆಯನ್ನು ಹಂತ ಹಂತವಾಗಿ ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದು ಶಾಸಕ ಹೆಚ್.ವಿ.ವೆಂಕಟೇಶ್ ರವರು ಹೇಳಿದರು.

ಪಟ್ಟಣದ ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ಬುಧವಾರ ತಾಲ್ಲೂಕು ಆಡಳಿತ, ಪುರಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆಗೆ ನೀಡಿ ಮಾತನಾಡಿದ ಅವರು
ಬಿಜೆಪಿ ದುರಾಡಳಿತದ ವಿರುದ್ಧ ನಾವು ಹೋರಾಟ ಮಾಡಿದ ಫಲವಾಗಿ ನಿಮ್ಮೆಲ್ಲರ ಸಹಕಾರದಿಂದ ನಮ್ಮ ರ‍್ಕಾರ ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳನ್ನು ಈಡೇರಿಸಲಾಗಿದೆ.
ಯುವನಿಧಿ ಯೋಜನೆಯನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದ ರ‍್ಕಾರ ನಂಬಿಕೆ, ವಿಶ್ವಾಸವನ್ನಿಟ್ಟು ೧೩೫ ಸ್ಥಾನಗಳನ್ನು ಗೆಲ್ಲಲು ನೀವೆಲ್ಲರೂ ಆಶರ‍್ವಾದ ಮಾಡಿದ್ದೀರಿ. ಬಿಜೆಪಿಯವರು ಬಿಟ್ಟಿ ಭಾಗ್ಯಗಳನ್ನು ನೀಡಿದರೆ ರ‍್ಕಾರ ದಿವಾಳಿಯಾಗುತ್ತದೆ ಎಂದು ಸುಳ್ಳು ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸಲು ಮುಂದಾಗುತ್ತಿದ್ದಾರೆ. ಬಿಜೆಪಿ ಶ್ರೀಮಂತರ ಪರವಾಗಿರುವ ಪಕ್ಷ. ಕರ‍್ಪೋರೇಟರ್ ಕಂಪನಿಗಳ ಪರವಾಗಿ ನಿಲ್ಲುವ ಪಕ್ಷ. ನಮ್ಮ ರ‍್ಕಾರ ದೀನ ದಲಿತರ ಪರ, ಬಡವರ ಪರ ಕೆಲಸ ಮಾಡುತ್ತಿದೆ ಇದೇ ರೀತಿ ದೇಶಾದ್ಯಂತ ಕೆಲಸ ಮಾಡಲು ಮುಂದೆ ಬರುವ ಲೋಕಸಭೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರು

ಮಾಜಿ ಸಚಿವರಾದ ವೆಂಕಟರಮಣಪ್ಪ ರವರು ಮಾತನಾಡಿ, ಈ ತಾಲ್ಲೂಕಿನ ಜನತೆ ನನಗೆ ನಾಲ್ಕು ಬಾರಿ ಆಶರ‍್ವಾದ ಮಾಡಿದ್ದಾರೆ. ಆದ್ದರಿಂದ ನಿಮ್ಮ ಋಣ ನನ್ನ ಮೇಲಿದೆ. ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಡಿಸೆಂಬರ್ ತಿಂಗಳ ಅಂತ್ಯದೊಳಗೆ ತುಂಗಭದ್ರ ಯೋಜನೆಯ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೂ ತಲುಪಿಸುತ್ತೇವೆ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಸಿಡಿಪಿಒ ನಾರಾಯಣ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇಂದಿನಿಂದ ಹಂತ ಹಂತವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಒಟ್ಟು ತಾಲ್ಲೂಕಿನಲ್ಲಿ ೫೧, ೯೭೭ ಜನ ನೋಂದಣಿ ಮಾಡಿಸಿದ್ದು ೧೦ ಕೋಟಿ ೩೯ ಲಕ್ಷದ ೫೪ ಸಾವಿರ ನಮ್ಮ ತಾಲ್ಲೂಕಿನ ಪಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಜಮೆ ಆಗಲಿದೆ. ಶೇ.೮೬ ರಷ್ಟು ಮಾತ್ರ ನೋಂದಣಿಯಾಗಿದ್ದು ನಗರ ಪ್ರದೇಶದಲ್ಲಿ ೫೨೮೬ ಮತ್ತು ಗ್ರಾಮೀಣ ಪ್ರದೇಶದಲ್ಲಿ ೪೬೬೯೧ ಒಟ್ಟು ೫೧೯೭೭ ಬಾಕಿ ಪಲಾನುಭವಿಗಳ ಸಂಖ್ಯೆ ನಗರ ೧೦೯೧, ಗ್ರಾಮೀಣ ೭೦೪೮ ಒಟ್ಟು ೮೧೩೯ ಪಲಾನುಭವಿಗಳು ರ‍್ಜಿ ಸಲ್ಲಿಸಬೇಕಾಗಿದೆ.

ಈ ಸಂರ‍್ಭದಲ್ಲಿ ತಹಶೀಲ್ದಾರ್ ವರದರಾಜು, ಇ.ಒ ಜಾನಕಿ ರಾಮ್, ರಕೀಬ್ ಉಲ್ಲಾ, ರಾಜ್ ಗೋಪಾಲ್, ಪುರಸಭೆ ಮಾಜಿ ಅಧ್ಯಕ್ಷ ಗುರ‍್ರಪ್ಪ, ಹಿರಿಯ ವಕೀಲ ವೆಂಕಟರಾಮರೆಡ್ಡಿ, ಸುದೇಶ್ ಬಾಬು, ರಾಜೇಶ್, ರಾಮಾಂಜಿನಪ್ಪ, ತೆಂಗಿನಕಾಯಿ ರವಿ, ಧನಲಕ್ಷ್ಮಿ ಲಕ್ಷ್ಮಿದೇವಿ, ಜಿ.ಉಮಾದೇವಿ, ಗೀತಾ, ಸುಧಾಲಕ್ಷ್ಮಿ, ಅನ್ನಪರ‍್ಣಮ್ಮ, ರವಿಕುಮಾರ್, ಗರ‍್ತಿ ನಾಗರಾಜು, ರಾಮಕೃಷ್ಣರೆಡ್ಡಿ, ಇಮ್ರಾನ್, ಕಿರಣ್, ಆಲಿ, ಗುತ್ತಿಗೆದಾರರ ಪವನ್, ಸೀನಪ್ಪ, ರಾಮಪ್ಪ, ಕಾಂಗ್ರೆಸ್ ಯುವ ಮುಖಂಡರಾದ ಪ್ರಮೋದ್, ಭಾಸ್ಕರ್ ರೆಡ್ಡಿ, ರಿಜ್ವಾನ್ ಉಲ್ಲಾ ಮತ್ತಿತರರು ಇದ್ದರು.

(Visited 1 times, 1 visits today)