ತುಮಕೂರು

ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ನೀಡುವುದು ಭಾರತೀಯ ಸನಾತನ ಧರ್ಮದ ಪ್ರಮುಖ ದ್ಯೇಯ ಎಂದು ಪಾವಗಡದ ರಾಮಕೃಷ್ಣ ಆಶ್ರಮದ ಡಾ.ಜಪಾನಂದ ಜೀ ತಿಳಿಸಿದ್ದಾರೆ.
ನಗರದ ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್ ಅವರ ಸ್ಥಳೀಯ ಪ್ರದೇಶಾಭಿವೃದ್ದಿ ನಧಿಯಿಂದ ಸುಮಾರು ೮ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭÀದ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು,ಇಡೀ ದೇಶದಲ್ಲಿಯೇ ವಿಶ್ವವಿದ್ಯಾಲಯವೊಂದು ತನ್ನಲ್ಲಿ ಕಲಿಯುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವುದು ತುಮಕೂರು ವಿಶ್ವವಿದ್ಯಾಲಯ ಮಾತ್ರ. ಇತ್ತೀಚಗೆ ಲಂಡನ್ ವಿಶ್ವವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಭಾರತೀಯ ಮಕ್ಕಳಿಗಾಗಿ ಇಸ್ಕಾನ್ ಸಂಸ್ಥೆ ಮದ್ಯಾಹ್ನದ ಬಿಸಿಯೂಟ ಆರಂಭಿಸಿದ್ದು,ಇದು ಕೂಡ ಭಾರತೀಯ ಸನಾತನ ಧರ್ಮದ ದ್ಯೋತಕವಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಬರ ಆರಂಭಗೊAಡಿದೆ.ನಗರದ ಎಂಪ್ರೆಸ್ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಗ್ರಾಮೀಣ ಭಾಗದಿಂದ ಸಾವಿರಾರು ಮಕ್ಕಳು ಬರುತ್ತಾರೆ.ಅವರಿಗೂ ಸಹ ಸಾರ್ವಜನಿಕರು ಮತ್ತು ದಾನಿಗಳ ಸಹಾಯದಿಂದ ಮದ್ಯಾಹ್ನದ ಬಿಸಿಯೂಟ ನೀಡಲು ಅಗತ್ಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅದು ಸಹ ಉದ್ಘಾಟನೆಗೊಳ್ಳಲಿದೆ. ಇದರಿಂದ ಸುಮಾರು ೨೦೦೦ ಮಕ್ಕಳಿಗೆ ಅನುಕೂಲವಾಗಲಿದೆ ಎಂದ ಸ್ವಾಮೀಜಿಗಳು, ಸುಮಾರು ೧೫೦೦ ಮಕ್ಕಳು ಕಲಿಯುತ್ತಿರುವ ತುಮಕೂರು ವಿವಿ ಕಲಾ ಕಾಲೇಜಿನ ಮಕ್ಕಳಿಗಾಗಿ ತಮ್ಮ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟ ಶಾಸಕ ಜೋತಿಗಣೇಶ್ ಅವರಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಕುಡಿಯುವ ನೀರು ಅತ್ಯಮೂಲ್ಯವಾದ ವಸ್ತು.ಹಾಗಾಗಿ ಅದನ್ನು ಎಂದಿಗೂ ಪೊಲು ಮಾಡಬೇಡಿ. ಕುಡಿಯಲಿಷ್ಟ ಬಳಸಿ, ಕೈತೊಳೆಯಲು, ನಿಮ್ಮ ತಿಂಡಿ ಡಬ್ಬಿ ತೊಳೆಯಲು ಬೇರೆ ನೀರಿದೆ.ಅದನ್ನು ಬಳಕೆ ಮಾಡಿ.ವಿಶ್ವವಿದ್ಯಾಲಯ ನೀಡಿರುವ ಈ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸತ್ಪçಜೆಗಳಾಗಿ ರೂಪಗೊಳ್ಳಿ ಎಂದು ಸ್ವಾಮೀಜಿ ಸಲಹೆ ನೀಡಿದರು.
ರೆಡ್‌ಕ್ರಾಸ್ ದೆಹಲಿ ಪ್ರತಿನಿಧಿ ಎಸ್.ನಾಗಣ್ಣ ಮಾತನಾಡಿ,ಸರಕಾರದ ನೀಡಬೇಕಾದ ಸವಲತ್ತನ್ನು ದಾನಿಗಳ ಸಹಕಾರದಿಂದ ನಿಮಗೆ ಸ್ವಾಮೀಜಿಯವರು ಒದಗಿಸಿದ್ದಾರೆ. ಹೆಚ್ಚು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉನ್ನತ್ತಿಯತ್ತ ಮುನ್ನೆಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಮಾತನಾಡಿ,೧೫೦೦ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ನೀಡುವುದು ಅಷ್ಟು ಸುಲಭದ ಮಾತಲ್ಲ. ರುಚಿ, ಶುಚಿಯ ಜೊತೆಗೆ,ಗುಣಮಟ್ಟದ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಇದುವರೆಗೂ ಕುಡಿಯುವ ನೀರಿನ ಕೊರತೆ ಇದ್ದು, ಅದು ಕೂಡ ಇಂದು ನಿವಾರಣೆಯಾಗಿದೆ. ಇದರಿಂದ ಮಕ್ಕಳಿಗೆ ಆಹಾರದ ಜೊತೆಗೆ ಶುದ್ದ ಕುಡಿಯುವ ನೀರು ನೀಡಿದ ತೃಪ್ತಿ ನಮಗಿದೆ.ಈ ರೀತಿಯ ಯೋಜನೆ ಇಲ್ಲ. ನಾನು ಆರಂಭದಲ್ಲಿ ಕುಲಪತಿಯಾಗಿ ಬಂದಾಗ ಇಲ್ಲಿನ ಎಲ್ಲಾ ಜನಪ್ರತಿನಿಧಿಗಳನ್ನು ಭೇಟಿಯಾಗಿ ವಿವಿಯ ಭೌತಿಕ ಮತ್ತು ಭೌದ್ಧಿಕ ಬೆಳೆವಣಿಗೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇ, ಅದರ ಫಲವಾಗಿ ಒಂದೊAದೆ ಸವಲತ್ತುಗಳು ತಲುಪತ್ತಿವೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳ ಸಿಗಲಿವೆ ಎಂಬ ವಿಶ್ವಾಸ ನಮಗಿದೆ ಎಂದರು.
ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ,ತುಮಕೂರು ವಿವಿ ಹಂತ ಹಂತವಾಗಿ ಅಭಿವೃದ್ದಿ ಹೊಂದುತ್ತಿದ್ದು,ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಾಗಿರುವ ವಿವಿಯ ಕ್ಯಾಂಪಸ್‌ನಲ್ಲಿ ಒಂದು ಇಂದಿರಾ ಕ್ಯಾಂಟೀನ್ ತೆರೆಯುವ ಇಚ್ಚೆ ಇತ್ತು. ಆ ಹೊತ್ತಿಗೆ ಜಪಾನಂದಜೀ ಅವರ ಮಾರ್ಗದರ್ಶನದಲ್ಲಿ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ ಆರಂಭವಾಯಿತು.ಕುಡಿಯುವ ನೀರಿನ ಸಮಸ್ಯೆಗೆ ಇಂದು ಮುಕ್ತಿ ಹಾಡಲಾಗಿದೆ.ಗಂಟೆಗೆ ಒಂದು ಸಾವಿರ ಲೀಟರ್ ಶುದ್ದ ಕುಡಿಯುವ ನೀರು ನೀಡುವ ಈ ಘಟಕದಿಂದ ಬಿಸಿಯೂಟದ ಮಕ್ಕಳಿಗೆ ಹಾಗೂ ಕಾಲೇಜಿಗೆ ಸಾಕಾಗಲಿದೆ.ಭವಿಷ್ಯದಲ್ಲಿ ಒಂದು ದೊಡ್ಡ ಗ್ರಂಥಾಲಯ, ಕಲಾಭವನ ಹಾಗೂ ವಕೇಷನಲ್ ಸೆಂಟರ್ ತೆರೆಯ ಬೇಕೆಂಬ ಇಚ್ಚೆ ಇದೆ. ಇದರ ಜೊತೆಗೆ, ಪ್ರತ್ಯೇಕವಾಗಿ ಕಾರ್ಮಸ್ ವಿಭಾಗದ ಕಟ್ಟಡವನ್ನು ನಿರ್ಮಾಣ ಮಾಡಲು ವಿವಿ ಮುಂದಾಗಿರುವುದು ಸಂತೋಷದ ವಿಚಾರ ಎಂದರು.
ವೇದಿಕೆಯಲ್ಲಿ ಶಾಸಕರಾದ ಜಿ.ಬಿ.ಜೋತಿಗಣೇಶ್,ತುಮಕೂರು ವಿವಿ ಕುಲಸಚಿವೆ ನಾಯಿದಾ ಜಂ ಜಂ, ಅನ್ನಪೂರ್ಣೆಶ್ವರಿ ಮದ್ಯಾಹ್ನದ ಬಿಸಿಯೂಟ ಸಮಿತಿ ಸದಸ್ಯರಾದ ಆರ್.ಎಲ್.ರಮೇಶ್‌ಬಾಬು,ಹೆಚ್.ಜಿ.ಚಂದ್ರಶೇಖರ್, ನಟರಾಜಶೆಟ್ಟಿ,ಗುತ್ತಿಗೆದಾರರಾದ ವಿರೂಪಾಕ್ಷಪ್ಪ, ಕಲಾ ಕಾಲೇಜಿನ ಉಪನ್ಯಾಸಕರು, ಅಧ್ಯಾಪಕರುಗಳು ಪಾಲ್ಗೊಂಡಿದ್ದರು.
ಇದೇ ವೇಳೆ ವಿಶ್ವದ ಅಗ್ರಮಾನ್ಯ ಸಂಶೋಧಕರು, ವಿe್ಞÁನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ತುಮಕೂರು ವಿವಿಯ ಇಬ್ಬರು ವಿe್ಞÁನಿಗಳಾದ ಡಾ.ನಾಗಭೂಷಣ್ ಮತ್ತು ಡಾ.ಸುರೇಶ್‌ಬಾಬು ಅವರುಗಳನ್ನು ಅಭಿನಂದಿಸಲಾಯಿತು

(Visited 1 times, 1 visits today)