ಕೊರಟಗೆರೆ

filter: 0; fileterIntensity: 0.0; filterMask: 0; brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
filter: 0; fileterIntensity: 0.0; filterMask: 0; brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;

ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೊಳವನಹಳ್ಳಿ ಗ್ರಾಮದ ನಾಡ ಕಚೇರಿ ಒಳಗೆ ನೀರು ಸೋರುತ್ತಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದ್ದಾವೆ ಎಂದು ಸಾರ್ವಜನಿಕರು ದೂರಿದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರ ಸ್ಥಾನದಲ್ಲಿರುವ ನಾಡಕಚೇರಿ ಹಾಗೂ ಕಂದಾಯ ಅಧಿಕಾರಿಗಳ ಕಚೇರಿ ಸಂಪೂರ್ಣ ನೀರು ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈ ಎರಡು ಇಲಾಖೆಯ ಕಟ್ಟಡಗಳು ಸಂಪೂರ್ಣ ಶೀಥಲವಾಗಿದ್ದು, ಮಳೆ ಬಂದರೆ ಸಾಕು ಕಚೇರಿಯ ಒಳಗೆ ನೀರು ನಿಲ್ಲುತ್ತಿದ್ದು, ಅನೇಕ ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಕಟ್ಟಡ ಶಿಥಿಲಗೊಂಡಿದ್ದು, ಮಳೆ ಬಂದಾಗ ಕಟ್ಟಡದ ಹಲವೆಡೆ ಸೋರಲಿದೆ ಕಚೇರಿಯ ಸಿಬ್ಬಂದಿಗಳು ಮಳೆ ಬಂದಾಗ ದಾಖಲೆಗಳನ್ನ ಸಂರಕ್ಷಿಸುವುದು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ನಾಡಕಚೇರಿ ಆರೋಗ್ಯ ಇಲಾಖೆಗೆ ಸೇರಿದ್ದು, ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿಗೆ ಸ್ವಂತ ಕಟ್ಟಡ ಇಲ್ಲ. ಈ ಕಟ್ಟಡ ೬೦ ವರ್ಷಕ್ಕೂ ಹಳೆಯ ಕಟ್ಟಡವಾಗಿದ್ದು, ಯಾವಾಗ ಬೀಳುತ್ತದೆಯೋ ಎನ್ನವ ಆತಂಕದಲ್ಲಿ ಇಲ್ಲಿನ ಸಿಬ್ಬಂದಿಗಳು ಜೀವ ಕೈಯಲ್ಲಿ ಇಟ್ಟಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿದೆ.
ಸ್ಥಳೀಯರಾದ ಪುಟ್ಟಪ್ಪಯ್ಯ ಮಾತನಾಡಿ ಈ ಕಟ್ಟಡ ಸಾಕಷ್ಟು ಹಳೆಯ ಕಟ್ಟಡವಾಗಿದ್ದು, ಮಳೆ ಬಂದಾಗ ಕಟ್ಟಡ ಶಿಥಿಲಗೊಂಡು ಕಚೇರಿಯ ಒಳಗೆ ನೀರು ನಿಲ್ಲುತ್ತವೆ. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ನೀಡಲಾಗಿದ್ದು, ಯಾರು ಕೂಡ ಇತ್ತ ತಿರುಗಿ ನೋಡುತ್ತಿಲ್ಲ. ನಾಡಕಚೇರಿಗೆ ಸ್ವಂತ ಕಟ್ಟಡ ಇಲ್ಲ, ತಕ್ಷಣ ಅಧಿಕಾರಿಗಳು ಸ್ವಂತ ಕಟ್ಟಡ ಮಾಡಿ ಕೊಟ್ಟ ಈ ಭಾಗ ಸಾರ್ವಜನಿಕರಿಗೆ ಸಮಸ್ಯೆ ಬಗೆಹರಿಸಿ ಎಂದು ಹೇಳಿದರು.
ಗ್ರಾಮಸ್ಥ ಮುಜಾಹಿದ್ ಅಲಿ ಮಾತನಾಡಿ ನಮ್ಮ ಊರಿನ ನಾಡಕಚೇರಿ ಮಳೆ ಬಂದರೆ ಸಾಕು ಕಚೇರಿ ಒಳಗೆ ನೀರು ನಿಂತು ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಕಚೇರಿ ಒಳಗೆ ಇರುವ ಪೀಠೋಪಕರಣಗಳ ಮಳೆಯ ನೀರಿಗೆ ನೆಂದು ಹೋಗಿವೆ, ಅವುಗಳನ್ನ ರಕ್ಷಿಸಲು ಸಿಬ್ಬಂದಿಗಳು ಟಾರ್ಪಲ್ ಹಾಕಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ, ಜಿಲ್ಲಾಧಿಕಾರಿಗಳು ತಕ್ಷಣ ನಮ್ಮ ನಾಡಕಚೇರಿಯನ್ನ ಸ್ಥಳಾಂತರಿಸಿ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ ಹೊಳವನಹಳ್ಳಿ ನಾಡಕಚೇರಿ ಹಳೆಯ ಕಟ್ಟಡವಾಗಿದ್ದು, ನಾನು ಸ್ಥಳಕ್ಕೆ ಬೇಟಿ ನೀಡಿದ್ದೇನೆ, ಗೃಹ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅದಷ್ಟು ಬೇಗ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.

(Visited 1 times, 1 visits today)