ಹುಳಿಯಾರು:\


ಒಂದು ವರ್ಷ ಕಳೆದರೂ ನರೇಗಾ ಕಾಮಗಾರಿ ಮಾತ್ರ ಇಲ್ಲಿ ಮುಗಿದಿಲ್ಲ. ಅರ್ಧಕ್ಕೆ ಕೆಲಸ ನಿಂತಿರುವುದರಿAದ ಮಳೆ ಬಂದರೆ ಕೆಸರು, ಬೇಸಿಗೆಯಲ್ಲಿ ಧೂಳಾಗಿ ರಸ್ತೆ ಮಾರ್ಪಡುತ್ತದೆ. ಪರಿಣಾಮ ನಿತ್ಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಓಡಾಡಬೇಕಿದೆ. ಇದು ಹುಳಿಯಾರು ಹೋಬಳಿಯ ದಸೂಡಿ ಗ್ರಾಮ ಪಂಚಾಯ್ತಿ ಮೈಲೇಕಲ್ಲಹಟ್ಟಿ ರಸ್ತೆಯ ದುಸ್ಥಿತಿ.
ದಸೂಡಿ ಗ್ರಾಮ ಪಂಚಾಯ್ತಿಯಿAದ ಕೇವಲ ೧ ಕಿಮೀ ದೂರದಲ್ಲಿರುವ ಮೈಲಕಲ್ಲಹಟ್ಟಿ ಎಂಬ ಪುಟ್ಟ ಗ್ರಾಮವಿದೆ. ಈ ಗ್ರಾಮದವರು ದಸೂಡಿಗೆ ಬಂದೋಗಲು ಹಾಗೂ ದಸೂಡಿ ಮತ್ತು ದಬ್ಬಗುಂಟೆಯವರು ತಮ್ಮತಮ್ಮ ಜಮೀನುಗಳಿಗೆ ಓಡಾಡಲು ಈ ಮಣ್ಣು ರಸ್ತೆ ಅವಲಂಬಿಸಿದ್ದರು. ಆದರೆ ಈ ರಸ್ತೆ ತೀರಾ ಹದಗೆಟ್ಟು ಸಂಚಾರ ದುಸ್ತರವಾಗಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಿAದ ೨೦೨೨-೨೩ ನೇ ಸಾಲಿನ ನರೇಗಾ ಯೋಜನೆಯಡಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡರು.
ದಸೂಡಿ ಮೈಲೇಕಲ್ಲಹಟ್ಟಿಯಿಂದ ದೇವರ ಮರಡಿ ಕೆರೆಯವರೆವಿಗೂ ೩ ಲಕ್ಷ ರೂ. ವೆಚ್ಚದಲ್ಲಿ ಜಲ್ಲಿ ರಸ್ತೆ ಕಾಮಗಾರಿ ಆರಂಭಿಸಿದರು. ಆದರೆ ರಸ್ತೆಗೆ ಅಲ್ಲಲ್ಲಿ ಮಣ್ಣು ಹಾಕಿದ್ದು ಬಿಟ್ಟರೆ ಜಲ್ಲಿ ಹಾಕಲಿಲ್ಲ. ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ಸುಮ್ಮನಾದರು. ಪರಿಣಾಮ ಸರ್ಕಾರದ ಹಣ ಮೀಸಲಿಟ್ಟರೂ ಸುಗಮ ಸಂಚಾರಕ್ಕೆ ರಸ್ತೆ ಮಾತ್ರ ಸಿದ್ಧವಾಗಲಿಲ್ಲ. ಮೊದಲಿನಂತೆಯೇ ಮಳೆಗಾಲದಲ್ಲಿ ಕೆಸರು ಸಿಡಿಸಿಕೊಂಡು, ಬೇಸಿಗೆಯಲ್ಲಿ ಧೂಳಿನ ಮಜ್ಜನ ಮಾಡಿಕೊಂಡು ಓಡಾಡುವ ಕರ್ಮ ನಮ್ಮದಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಶಶಿಕುಮಾರ್.
ರಸ್ತೆ ಹದಗೆಟ್ಟಿರುವುದರಿಂದ ಶಾಲಾ ಮಕ್ಕಳು, ವೃದ್ಧರು, ರೋಗಿಗಳು ಓಡಾಡಲು ಪ್ರಯಾಸ ಪಡಬೇಕಿದೆ. ಇನ್ನು ಓಡಾಡಲೇ ಅಸಾಧ್ಯವಾಗಿರುವ ಈ ರಸ್ತೆಯಲ್ಲಿ ರೈತರು ತಮ್ಮ ಜಮೀನು ತೋಟಕ್ಕೆ ಗೊಬ್ಬರ ತೆಗೆದುಕೊಂಡು ಹೋಗಲು, ಅಲ್ಲಿನ ಫಸಲು ಮನೆ ತರಲು ಇನ್ನೆಷ್ಟು ಯಾತನೆ ಅನುಭವಿಸಬೇಕು ಹೇಳಿ? ಇನ್ನಾದರೂ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಕಾಮಗಾರಿಯನ್ನು ಪೂರೈಸಿ ಸುಮಗ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

(Visited 1 times, 1 visits today)