ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಿಡೀರ್ ದಾಳಿ : ಟ್ರಾಕ್ಟರ್ ಮತ್ತು ದ್ವೀಚಕ್ರ ವಾಹನ ವಶ

ಕೊರಟಗೆರೆ


ಜಯಮಂಗಲಿ ನದಿಯ ತೀತಾ ಜಲಾಶಯದ ಒಡಲಿಗೆ ಕನ್ನ ಹಾಕಲು ಯತ್ನಿಸುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಯ ಮೇಲೆ ತಹಶೀಲ್ದಾರ್ ಮುನಿಶಾಮಿರೆಡ್ಡಿ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿ ಟ್ರಾಕ್ಟರ್ ಮತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ ಮೋರಗಾನಹಳ್ಳಿಯ ಸಮೀಪದ ತೀತಾ ಜಲಾಶಯದ ಹಿಂಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ವೇಳೆ ಕೊರಟಗೆರೆ ತಹಶೀಲ್ದಾರ್ ಮುನಿಶಾಮಿರೆಡ್ಡಿ ದಿಡೀರ್ ದಾಳಿಸಿ ಟ್ರಾಕ್ಟರ್, ದ್ವೀಚಕ್ರ ವಾಹನ ಸೇರಿದಂತೆ ಹತ್ತಾರು ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಜಯಮಂಗಲಿ ನದಿ ಮರಳಿಗೆ ಕನ್ನ..
ಗರುಡಾಚಲ ಮತ್ತು ಜಯಮಂಗಲಿ ನದಿಯ ತೀತಾ ಜಲಾಶಯ ಮತ್ತು ಮಾವತ್ತೂರು ಕೆರೆಯ ಹಿಂಭಾಗ ಸಂಜೆಯಾದ್ರೇ ಸಾಕು ಜೆಸಿಬಿ ಮತ್ತು ಟ್ರಾಕ್ಟರ್‌ಗಳ ಆರ್ಭಟ ಪ್ರಾರಂಭ ಆಗುತ್ತೇ. ಕೋಳಾಲ ಪೊಲೀಸರಿಗೆ ಮಾಹಿತಿ ಲಭ್ಯವಿದ್ರು ಹೊಂದಾಣಿಕೆಯ ಕಾರಣದಿಂದ ಮೌನ ವಹಿಸುತ್ತಾರೆ. ಸ್ಥಳೀಯರು ಮಾಹಿತಿ ನೀಡಿದ್ರೇ ಅವರ ಮೇಲೆ ಮರಳು ದಂಧೇಕೊರರಿAದ ಧಮ್ಕಿ ಹಾಕಲಾಗುತ್ತೇ ಎಂಬ ಮಾತುಗಳು ಕೇಳಿಬಂದಿವೆ.
ಲಾರಿ ಮೂಲಕ ಬೆಂಗಳೂರಿಗೆ ರವಾನೆ..
ತೀತಾ ಜಲಾಶಯದ ಮರಳನ್ನು ಟ್ರಾಕ್ಟರ್ ಮೂಲಕ ರಾತ್ರೋರಾತ್ರಿ ಹೊರಗಡೆ ಸಾಗಿಸಲಾಗುತ್ತೇ. ಗ್ರಾಮದ ಹೊರಗಡೆ ಐದಾರು ಕಡೆಯಲ್ಲಿ ಮರಳಿನ ರಾಶಿಯನ್ನೇ ಮಾಡಿ ನಂತರ ಲಾರಿಗೆ ರಾತ್ರೋರಾತ್ರಿ ತುಂಬಿ ಬೆಂಗಳೂರು ನಗರಕ್ಕೆ ರವಾನಿಸಲಾಗುತ್ತೇ. ಕೋಳಾಲ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಅಕ್ರಮ ಮರಳು ದಂದೆಯು ಕಳೆದ ೨ತಿಂಗಳಿAದ ನಡೆಯುತ್ತೀದೆ. ತಡೆ ಹಿಡಿಯಬೇಕಾದ ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದ್ದಾರೆ.
ಜಯಮಂಗಲಿ ನದಿಯಲ್ಲಿ ಅಕ್ರಮವಾಗಿ ಮರಳು ತುಂಬುತ್ತೀದ್ದ ಟ್ರಾಕ್ಟರ್ ಮತ್ತು ದ್ವೀಚಕ್ರ ವಾಹನವನ್ನು ಕೊರಟಗೆರೆ ತಹಶೀಲ್ದಾರ್ ಕೋಳಾಲ ಪಿಎಸೈ ರೇಣುಕಾಗೆ ತಡರಾತ್ರಿಯೇ ಹಸ್ತಾಂತರ ಮಾಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ. ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 1 times, 1 visits today)