ತುಮಕೂರು :
ನಗರದ ಮಹಾನಗರಪಾಲಿಕೆ ವ್ಯಾಪ್ತಿಯ ತುಮಕೂರು ನಗರ ವಿಧನಾಸಭಾ ಕ್ಷೇತ್ರದ ಚುನಾವಣಾ ಮತದಾರರ ಗುರುತು ಚೀಟಿಗೆ ಅಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ನಗರಯೋಜನೆಯ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಶು ಅಭಿವೃದ್ಧಿಯೇತರ ಕೆಲಸಗಳಿಗೆ ನಿಯೋಜಿಸಬಾರದೆಂದು ಸಂ.ಡಿಡಬ್ಲ್ಯೂಸಿ.ಐ.ಸಿಡಿಎಸ್‍ಜಿ-1:73:2009-10/16-17 ಮತ್ತು ದಿ. 9-8-2018ರ ಮಾನ್ಯ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ¸ಭÉಯ ನಡವಾಳಿ ಇದೆ.
ಆದರೂ ಮತದಾರರ ದತ್ತಾಂಶವನ್ನು ಜೋಡಣೆ ಮಾಡಲು ಮತ್ತು ದೃಢೀಕರಿಸಲು ಸ್ವಯಂಪ್ರೇರಿತವಾಗಿ ಆಧಾರ್ ಲಿಂಕ್ ಜೋಡಣೆಯನ್ನು ಓಗಿSP/ಗಿಊಂ ಂPP ಮುಖಾಂತರ ಜೋಡಣೆಮಾಡಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಮತದಾರರಿಗೆ ನಿಯೋಜನೆಗೊಂಡಿರುವ ಕಾರ್ಯಕರ್ತೆಯರು ಪ್ರತಿನಿತ್ಯ ತಿಳಿಹೇಳುತ್ತಿದ್ದಾರೆ ಮತ್ತು ಜೋಡಣೆ ಮಾಡಿಸುತ್ತಿದ್ದಾರೆ. ಈ ಸಮಯದಲ್ಲಿ ಕೆಲವರು ವಾಸ ಸ್ಥಳಾಂತರಗೊಂಡಿದ್ದು, ಮತಗಟ್ಟೆ ಅದಲುಬದಲಾಗಿರುವುದು, ನ್ಯಾಯಾಲಯದಿಂದ ಮತದಾರರ ಗುರುತು ಚೀಟಿಗೆ ಆಧಾರ ಜೋಡಣೆ ಕಡ್ಡಾಯವಲ್ಲ ಅಂತ ಆದೇಶ ಇದೆ ಎಂದು ಜನರು ಪ್ರಸ್ನಿಸುತ್ತಿದ್ದಾರೆ.
ಮತ್ತೆ ಕೆಲವರು ನಮಗೆ ಇಷ್ಠವಾದಾಗ ಆಧಾರ ಜೋಡಣೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಿದ್ದಾರೆ ಇನ್ನೂ ಕೆಲವರು ಆಧಾರ್ ಕಾರ್ಡ್ ಕೊಡಲು ನಿರಾಕರಿಸಿರುತ್ತಾರೆ. ಇಂತಹ ಒತ್ತಡಗಳು ಇದ್ದಾಗಲೂ ನಮ್ಮ ಕಾರ್ಯಕರ್ತೆಯರು ಚುನಾವಣಾ ಸುಧಾರಣೆಗಳ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಹೆಚ್ಚುವರಿ ಕೆಲಸ ನಿರ್ವಹಿಸಿದ್ದಾರೆ.
ಇನ್ನೂ ಇಲಾಖೆ ಕೆಲಸ ಅಂದರೆ ಪೋಷಣ್ ಮಾಸಾಚರಣೆ ಅಂಗವಾಗಿ ಕಾರ್ಯಕ್ರಮಗಳು ಮತ್ತು ಅಪೌಷ್ಠಿಕ ಮಕ್ಕಳನ್ನು ಗುರುತಿಸುವ ಕೆಲಸಕ್ಕೆ ಹಿನ್ನಡೆಯಾಗಿದೆ ಹಾಗು ಅಂಗನವಾಡಿ ಕೆಲಸಗಳು ಕುಂಟಿತವಾಗುತ್ತಿವೆ ಎಂದು ಮೇಲ್ವಚಾರಕರು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುತ್ತಿದ್ದಾರೆ ಪದೇ- ಪದೇ ನೋಟೀಸ್ ಸಹ ನೀಡಲು ಸೂಚಿಸಿರುತ್ತಾರೆ.
ಇದನ್ನು ತಪ್ಪಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ತುಮಕೂರು ತಾಲ್ಲೂಕು ಸಮಿತಿಯಿವತಿಯಿಂದ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಛೇರಿ ಆಡಳಿತಾಧಿಕಾರಿ ಬಾಗ್ಯಮ್ಮನವರಿಗೆ ಚುನಾವಣಾ ಮತದಾರರ ಗುರುತು ಚೀಟಿಗೆ ಅಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಮತಗಟ್ಟೆ
ಅಧಿಕಾರಿಮಟ್ಟದ ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡಬೇಕೆಂದು ಸಿ.ಐ.ಟಿ.ಯು. ಜಿಲ್ಲಾ ಉಪಾಧ್ಯಕ್ಷ ಬಿ. ಉಮೇಶ್, ಸಂಘದ ಅಧ್ಯಕ್ಷರಾದ ಗೌರಮ್ಮ ಬಿ.ಕೆ., ಪ್ರಧಾನ ಕಾರ್ಯದರ್ಶಿ ಜಬೀನಾ ಖಾತೂನ್, ಖಜಾಂಚಿ ವಿನೋದ, ಸಂಘದ ಮುಖಂಡರಾದ ಡಿ. ನಾಗರತ್ನ, ರಿಹಾನಬಾನು, ವೈ.ಎಸ್.ನಾಗರತ್ನ ಮುಂತಾದವರು ಮನವಿಪತ್ರ ನೀಡಿ ಒತ್ತಾಯಿದರು.