ತುಮಕೂರು :


ನಗರದಲ್ಲಿ 6 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ನನಸು ಪತ್ತಿನ ಸಹಕಾರ ಸಂಘ ನಿ., ದ ನೂತನ ಕಚೇರಿಯು ನಗರದ ಪಾಂಡುರಂಗನಗರದ ಲಾಸರ್ ಲೇತ್ ರಸ್ತೆಯಲ್ಲಿ ಗುರುವಾರÀ ಉದ್ಘಾಟನೆಗೊಂಡಿತು.
ಚಿಕ್ಕಪೇಟೆಯ ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ನನಸು ಪತ್ತಿನ ಸಹಕಾರ ಸಂಘ 2016ರಲ್ಲಿ ಆರಂಭಗೊಂಡು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
2016ರಲ್ಲಿ ಮಹಿಳೆಯರಿಗೆ 5 ಸಾವಿರ ರೂ.ಗಳ ಸಾಲ ನೀಡುವ ಮೂಲಕ ನನಸು ಪತ್ತಿನ ಸಹಕಾರ ಸಂಘ ಆರಂಭಗೊಂಡಿತು. ಅಂದಿನಿಂದ 6 ವರ್ಷಗಳವರೆಗೆ ಯಶಸ್ವಿಯಾಗಿ, ಜನಸ್ನೇಹಿಯಾಗಿ, ಸಹಕಾರ ಸ್ನೇಹಿಯಾಗಿ ಸಂಘ ಮುಂದುವರೆದುಕೊಂಡು ಬರುತ್ತಿದೆ ಎಂದರು.
ಮಹಿಳೆಯರೆಲ್ಲರೂ ಸೇರಿ ಸಂಘ ಸ್ಥಾಪಿಸಿಕೊಂಡು ಬರುತ್ತಿರುವುದು ಶ್ಲಾಘನೀಯ, ಮಹಿಳಾ ಸಬಲೀಕರಣವಾಗುತ್ತಿದೆ. ಎಲ್ಲಾ ಗೃಹಿಣಿಯರು ತಮ್ಮ ಮನೆ ಮಕ್ಕಳು ಎಲ್ಲರನ್ನೂ ಸುಧಾರಿಸಿಕೊಂಡು ಅದರ ಜೊತೆಯಲ್ಲಿ ಸಾಮಾಜಿಕವಾಗಿ ಸೇವೆ ಮಾಡಬೇಕು ಎಂಬ ಉದ್ಧೇಶದಿಂದ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಪೂರೈಸಿ, ನಂತರ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಎಷ್ಟೋ ಬಡ ಮಹಿಳೆಯರಿಗೆ ಈ ನನಸು ಪತ್ತಿನ ಸಹಕಾರ ಸಂಘದಿಂದ ಸಹಾಯವಾಗಿದೆ. ಬಡ ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಿಕೊಟ್ಟು ಅವರ ಯೋಜನೆಗಳಿಗೆ, ಯೋಚನೆಗಳಿಗೆ ಚಾಲನೆಯನ್ನು ಕೊಡುತ್ತಾ ಬಂದಿದೆ ಎಂದರು.
ಮೊದಲು ಈ ಸಂಘದ ಕಚೇರಿಯು ಇದೇ ಚಿಕ್ಕಪೇಟೆಯಲ್ಲಿ ಚಿಕ್ಕದಾದ ಕಚೇರಿಯನ್ನು ಹೊಂದಿತ್ತು, ಈಗ ಇದೇ ಚಿಕ್ಕಪೇಟೆಯಲ್ಲಿ ತನ್ನ ನೂತನ ಕಚೇರಿಯನ್ನು ಅತ್ಯಂತ ಸುವ್ಯವಸ್ಥಿತವಾದ ಜಾಗಕ್ಕೆ ವರ್ಗಾಯಿಸಿಕೊಂಡಿದ್ದು ಅಭಿನಂದನೀಯ. ಮುಂದಿನ ದಿನಗಳಲ್ಲಿ ಈ ನನಸು ಪತ್ತಿನ ಸಹಕಾರ ಸಂಘ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿಯಾಗಲಿ ಎಂದು ಆಶಿಸಿದರು.
ನನಸು ಪತ್ತಿನ ಸಹಕಾರ ಸಂಘವನ್ನು ಅಧ್ಯಕ್ಷರಾದ ನಾಗಮಣಿ ಜಿ. ಅವರು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.
ನನಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ನಾಗಮಣಿ ಜಿ. ಮಾತನಾಡಿ, ನಮ್ಮ ಸಹಕಾರ ಸಂಘವು ಹಳೆ ಕಟ್ಟದಲ್ಲಿತ್ತು. ಈಗ ಸುಸಜ್ಜಿತವಾದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದರು.
ನಮ್ಮ ಸಂಘವು ಆರಂಭಗೊಂಡು 6 ವರ್ಷಗಳು ಕಳೆದಿವೆ. ಆರಂಭದಿಂದಲೂ ಅತ್ಯಂತ ಯಶಸ್ವಿಯಾಗಿ ಸಂಘವನ್ನು ಮುನ್ನಡೆಸಿಕೊಂಡು ಬರುತ್ತಿದ್ದು, ಬಡ ಮಹಿಳೆಯರು, ಕೂಲಿಕಾರ್ಮಿಕರು ಆರ್ಥಿಕವಾಗಿ ಸದೃಢರಾಗಲು ಸಾಲಸೌಲಭ್ಯ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ನನಸು ಪತ್ತಿನ ಸಹಕಾರ ಸಂಘ ಯಶಸ್ವಿಯಾಗಿ ಮುನ್ನಡೆಯಲು ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರ ಸಹಕಾರವೇ ಕಾರಣ. ಅವರನ್ನು ಈ ಸಂದರ್ಭದಲ್ಲಿ ಅಭಿನಂಧಿಸುತ್ತೇನೆ ಎಂದರು.
ಇದುವರೆಗೂ ನನಸು ಪತ್ತಿನ ಸಹಕಾರ ಸಂಘಕ್ಕೆ ಯಾವುದೇ ಸಂಸ್ಥೆ ಬೆಂಬಲವಾಗಿ ನಿಂತಿಲ್ಲ, ಸ್ವಂತವಾಗಿ ಇರುವ ಬಂಡವಾಳದಲ್ಲೇ ನಾವು ಬಡಜನರಿಗೆ ಸಹಾಯ ಮಾಡುತ್ತಿದ್ದೇವೆ. ಹೆಚ್ಚು ಸದಸ್ಯರನ್ನು ಹೊಂದಿರುವ ನಮ್ಮ ಸಂಘಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಾಗಲೀ ಯಾವುದೇ ಸಂಘ ಸಂಸ್ಥೆಗಳಾಗಲಿ ನಮ್ಮ ಸಂಘಕ್ಕೆ ಸಹಾಯ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಲಸೌಲಭ್ಯ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಉದ್ಘಾಟನೆ ನಂತರ ಹಿರೇಮಠಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನನಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ನಾಗಮಣಿ ಜಿ., ಉಪಾಧ್ಯಕ್ಷೆ ಟಿ.ಜಿ.ಮಹಾಲಕ್ಷ್ಮಿ, ಅಂಜನಾದ್ರಿ ಭಜನಾ ಮಂಡಳಿ ನಿರ್ದೇಶಕಿ ಜಯಲಕ್ಷಿ,್ಮ, ಕಾರ್ಯದರ್ಶಿ ಸರೋಜ, ಸಂಘದ ನಿರ್ದೇಶಕರುಗಳಾದ ಜಯಲಕ್ಷ್ಮಿ, ಇಂದ್ರ, ಭಾಗ್ಯ, ಗಾಯತ್ರಿ, ರಾಜೇಶ್ವರಿ, ಲಕ್ಷ್ಮೀ, ಸದಸ್ಯರುಗಳಾದ ನಾಗಮ್ಮ, ಆಂಜಿನಪ್ಪ, ವೆಂಕಟಾಚಲಯ್ಯ, ಮೆಹಬೂಬ್ ಖಾನ್, ಕೆ.ಪಿ.ಮಲ್ಲಿಕಾರ್ಜುನ, ಜಯಣ್ಣ, ಮಹೇಶ್, ಲಿಂಗರಾಜು ಸೇರಿದಂತೆ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

(Visited 5 times, 1 visits today)