ತುಮಕೂರು :
ಬೀಡಿ ಕಾರ್ಮಿಕರಿಗೆ ಸೂಕ್ತ ಪರಿಹಾರ/ ಪರಿರ್ಯಾಯ ಉದ್ಯೋಗ,ಸಮಾನ್ಯ ರಾಷ್ಟಿಯ ಕನಿಷ್ಟ ಕೂಲಿ ಸಾವಿರ ಬೀಡಿಗೆ 375 ರೂ ನಿಗದಿಗೆ, ಬೀಡಿ & ಸಿಗಾರ್ ಕಾರ್ಮಿಕರ ಕಾನೂನು ಉಳಿವಿಗೆ, ಬೀಡಿ ಕಾರ್ಮಿಕರ ಪಿ.ಎಫ್ . ಪಿಂಚಣಿಯನ್ನು ಕನಿಷ್ಟ ಮಾಸಿಕ 6000 ರೂಪಾಯಿ ನಿಗಧಿಮಾಡಬೇಕು. ಮತ್ತು ಪಿ.ಎಫ್ ನಲ್ಲಿ ಬೀಡಿ ಕಾರ್ಮಿಕರ ಹೆಸರು, ಹುಟ್ಟಿದ ದಿನ ಇತ್ಯಾಧಿ ಸಮಸ್ಯೆಗಳನ್ನು ಪರಿಹಾರ ಕಾಣಲು ಸರಳ ವಿಧಾನವನ್ನು ಅನುಸರಿಸಬೇಕು, ಕನಿಷ್ಟ ಕೂಲಿ ಹಾಗು ಬಾಕಿ ತುಟ್ಟಿ ಭತ್ಯಜಾರಿಗಾಗಿ, ಬೀಡಿ ಕಾರ್ಮಿಕರ ವಿವಿಧ ಯೋಜನೆಗಳಿಗೆ ಮೂಲಾಧಾರವಾಗಿದ್ದ “ ಬೀಡಿ ಸೆಸ್ಸ್ “ ಅನ್ನು ಪುನರ್ ಸ್ಥಾಪಿಸಬೇಕು, ಬೀಡಿ ಮತ್ತು ಸೀಗಾರ್ ಕಾರ್ಮಿಕರ ಸೇವಾ ಶರತ್ತು ಕಾಯಿದೆ- 1966 ರದ್ದುಪಡಿಸಬಾರದು. ಎಲ್ಲಾ ಬೀಡಿ ಕಾರ್ಮಿಕರಿಗೆ ಕಾನೂನು ಬದ್ದವಾಗಿ ನೀಡಬೇಕಾದ ಕನಿಷ್ಟ ವೇತನ, ಲಾಗ್ ಪುಸ್ತಕ, ಬೋನಸ್, ನೀಡುವಂತೆ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಎಲ್ಲಾ ಬೀಡಿ ಕಾರ್ಮಿಕರನ್ನು ಕಾರ್ಮಿಕರ ಭವಿಷ್ಯ ನಿಧಿಗೆ ಒಳಪಡಿಸಲು ಕಠಿಣ ಕ್ರಮಗಳನ್ನು ವಹಿಸ ಬೇಕು, ರಾಜ್ಯ ಸರ್ಕಾರಗಳು ಬೀಡಿ ಕಾರ್ಮಿಕರಿಗೆ ವಿಶೇಷವಾದ ಯೋಜನೆ/ ಪ್ಯಾಕೇಜ್ ರೂಪಿಸಿ – ಜಾರಿಗೆ ತರಬೇಕು. ಎಂದು ಒತ್ತಾಯಿಸಿ ಆಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್[ ಸಿಐಟಿಯು] ಸಂಯೋಜಿತ ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ ರಿ ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ದಿ; ಸೆ. 8, 2022 ‘’ಬೀಡಿ ಕಾರ್ಮಿಕರ ಹಕ್ಕೋತಾಯ ದಿನ’’ ಬಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶಾಹತಾಜ್ ಅವರು ಮಾತನಾಡಿ ಬೀಡಿ ಕಾರ್ಮಿಕ ಮಹಿಳೆಯರು ಸಂಕಷ್ಟದ ಬದುಕು ನಡೆಸುತ್ತಿದ್ದು ಸರ್ಕಾರಗಳು ಈ ಕಾರ್ಮಿಕರ ಬಗ್ಗೆ ಗಮನವೆ ಹರಿಸುತ್ತಿಲ್ಲ ಎಂದು ಅಪಾಧಿಸಿದರು. ಮನವಿ ಸ್ವಿಕರಿಸಲು ಬಂದ ಉಪ ತಹಸಿಲ್ದಾರ್ ಹಾಗು ಕಾರ್ಮಿಕ ನಿರಿಕ್ಷರಕರ ಬಳಿ ಅವರು ಅಹವಾಲುಗಳ ಸುರಿಮಳೆಯನ್ನೆಗೈದರು. ಸಮಸ್ಯಗಳನ್ನು ಅಲಿಸಿದ ಅಧಿಕಾರಿಗಳು ನೀತಿ ನಿರೂಪಕ ಅಂಶಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯಧರ್ಶಿ ಸೈಯದ್ ಮುಜೀಬ್ ಅವರು ರಾಜ್ಯದಲ್ಲಿ 7-8 ಲಕ್ಷಜನ ಹಾಗೆ ಜಿಲ್ಲೆಯಲ್ಲಿ ಸರಿ ಸುಮಾರು 50-60 ಸಾವಿರ ಬೀಡಿ ಕಾರ್ಮಿಕರು ಇದ್ದಾರೆ , ಈ ಕಾರ್ಮಿಕರು ಹಲವು ದಶಕಗಳ ಕಾಲ ದುಡಿದಾಗ ಅದರಿಂದ ಸರ್ಕಾರ ಅಬ್ಕಾರಿ ತೆರಿಗೆ, ಈಗ ಜಿ.ಎಸ್.ಟಿ ಮೂಲಕ ಲಕ್ಷಂತರ ಕೋಟಿರೂಪಾಯಿಗಳನ್ನು ಆಧಾಯಗಳಿಸಿದೆ. ಅದರಲ್ಲಿ ಈಗ ಬೀಡಿ ಕಾರ್ಮಿಕರಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ಸಂಘ ಮುಖಂಡರಾದ ಶಾಹಿಸ್ತಾ ಪರ್ವಿನ್, ಇಂತಿಯಾಜ್, ರಪೀಕ್, ಹಲಿಮಾ ಬಾನು, ಮತ್ತಿತರರು ಇದ್ದರು
(Visited 10 times, 1 visits today)