ತುಮಕೂರು


ಬಿಜೆಪಿ ಹಿರಿಯ ನಾಯಕರು ಮತ್ತು ಕಟ್ಟಾಳು 1980ರಲ್ಲಿ ಬಿಜೆಪಿ ಪ್ರಾರಂಭಗೊಂಡ ಸಂಧರ್ಭದಲ್ಲಿ ಜಿಲ್ಲೆಯ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡು, ಎರಡು ದಶಕಗಳ ಕಾಲ ಸಕ್ರೀಯವಾಗಿ ಪಕ್ಷದ ಜವಾಬ್ದಾರಿ ನಿರ್ವಹಿಸಿದ್ದ ಕೊರಟಗೆರೆ ತಾಲ್ಲೂಕು ಜಟ್ಟಿ ಅಗ್ರಹಾರದ ಎ.ಎಂ.ಬಾಬು ರಾಜೇಂದ್ರ ಪ್ರಸಾದ್ (79) ಇಂದು (17.09.2022)ರ ಶನಿವಾರ ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಬಿಜೆಪಿ ತುಮಕೂರು ಜಿಲ್ಲಾ ಘಟಕ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಇವರಿಗೆ ಕಳೆದ ಮಂಗಳವಾರ ಜಟ್ಟಿ ಅಗ್ರಹಾರದಲ್ಲಿ ರಸ್ತೆ ದಾಟುವಾಗ ಅಪಘಾತವಾಗಿ, ಚಿಕಿತ್ಸೆಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ದಾಖಲಾಗಿ, ಇಂದು ನಿಧರಾಗಿದ್ದಾರೆ. ಇವರ ಹುಟ್ಟೂರು ಜಿಟ್ಟಿ ಅಗ್ರಹಾರದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗುವುದು.
ಇವರು ಬಿಜೆಪಿಯ ಸಾವಿರಾರು ಹೋರಾಟಗಳನ್ನು ಸಂಘಟಿಸಿ ಹೋರಾಟ ಮಾಡಿದ್ದರು. ಹಿಂದೂ ಸಮಾಜೋತ್ಸವ, ದೋಡಾ, ಲಾಲ್ ಚೌಕ್, ಕಿತ್ತೂರುರಾಣಿ ಚೆನ್ನಮ್ಮ ಮೈದಾನ ಹೋರಾಟ, ಅಯೋಧ್ಯೆ ಕರಸೇವಕರಾಗಿ ಹಾಗೂ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪ್ರಮುಖ ಮುಂಚೂಣಿ ನಾಯಕರಾಗಿ ಬಿಜೆಪಿಯಲ್ಲಿ ಬಾಬಣ್ಣ ಎಂದೇ ಪ್ರಖ್ಯಾತರಾಗಿದ್ದರು.
ಪಕ್ಷದ ಹಿರಿಯರಾಗಿದ್ದ ಎಸ್.ಮಲ್ಲಿಕಾರ್ಜುನಯ್ಯ, ಕರಂಬಳ್ಳಿ ಸಂಜೀವಶೆಟ್ಟಿ, ಎ.ಕೆ.ಸುಬ್ಬಯ್ಯ, ಕೈಲಾಸ್, ಕೆ.ಎಸ್.ಈಶ್ವರಪ್ಪ, ಅನಂತಕುಮಾರ್, ಗುರುರಾಜರಾವ್, ಬಿ.ಬಿ.ಶಿವಪ್ಪ, ಬಿ.ಎಸ್.ಯಡಿಯೂರಪ್ಪ, ಕಾಯಿ ಬಸವರಾಜು, ವೈ.ಸಿ.ನಂಜುಂಡಯ್ಯ, ತಾಂಡವಮೂರ್ತಿ, ಮಾ.ನ.ಸತ್ಯನಾರಾಯಣ್, ಸಿ.ವಿ.ಎಲ್.ಶಾಸ್ತ್ರಿ, ಎಸ್.ರಾಮಲಿಂಗಯ್ಯ, ಧನಪಾಲಶೆಟ್ಟಿ, ಸಿ.ವಿ.ಮಹದೇವಯ್ಯ, ಎಂ.ಬಿ.ನಂದೀಶ್, ಎಂ.ಡಿ.ಲಕ್ಷ್ಮೀನಾರಾಯಣ್, ಕಾಂಡಿಮೆಂಟ್ ಶಿವಣ್ಣ, ಗಂಗಸಂದ್ರ ಗುರು, ಸತ್ಯಮಂಗಲ ಸದಾಶಿವಯ್ಯ, ತುರುವೇಕೆರೆ ಸಿದ್ದಬಸಪ್ಪ, ಕೆ.ಪಿ.ಮಹೇಶ, ಎಲೆಕ್ಟ್ರಿಕ್ ಫಣೀಂದ್ರ ಮುಂತಾದ ಹಲವು ಮುಖಂಡರ ಜೊತೆ ಒಡನಾಟ ಇಟ್ಟುಕೊಂಡು ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಇವರು ಪತ್ನಿ ಹಾಗೂ ಪುತ್ರರನ್ನು ಅಗಲಿದ್ದಾರೆ. ಮೃತರಿಗೆ ಸಂತಾಪ ವ್ಯಕ್ತಪಡಿಸಿ, ಆತ್ಮಕ್ಕೆ ಶಾಂತಿ ಲಭಿಸಲಿ, ದುಖಃತಪ್ತ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ಗೃಹ ಸಚಿವರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ, ಮಂತ್ರಿಗಳಾದ ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಕಾರ್ಯದರ್ಶಿ ವಿನಯ್ ಬಿದರೆ, ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಮಾಜಿ ಸಚಿವಾರದ ಸೊಗಡು ಶಿವಣ್ಣ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಮಸಾಲೆ ಜಯರಾಂ, ಜಿ.ಬಿ.ಜ್ಯೋತಿಗಣೇಶ್, ಡಾ||ಎಂ.ರಾಜೇಶ್‍ಗೌಡ, ಮಾಜಿ ಶಾಸಕರಾದ ಕೆ.ಎಸ್.ಕಿರಣ್‍ಕುಮಾರ್, ಬಿ.ಸುರೇಶ್‍ಗೌಡ, ವಿಧಾನಪರಿಷತ್ ಸದಸ್ಯರಾದ ಚಿದಾನಂದ ಬಿ.ಗೌಡ, ಎಂ.ವೈ.ನಾರಾಯಣಸ್ವಾಮಿರವರುಗಳು ಪ್ರಾರ್ಥಿಸಿದ್ದಾರೆ.

(Visited 2 times, 1 visits today)