ತುಮಕೂರು


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಚಿ.ನಿ. ಪುರಷೋತ್ತಮ್‍ರವರು ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದ ಹೊಸದಾಗಿ ಸ್ಥಾಪಿಸಲಾದ ಗ್ರಂಥಾಲಯ ವಿಭಾಗವನ್ನು ಉದ್ಘಾಟನೆ ನೆರವೇರಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣದಿಂದ ವಂಚಿತರಿಗಾಗಿ “ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ” ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕದಾದ್ಯಂತ 23 ಪ್ರಾದೇಶಿಕ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವಲ್ಲಿ ಮುಂಚೂಣಿಯಲ್ಲಿದೆ. ಕರಾಮುವಿಯು ಉನ್ನತ ಶಿಕ್ಷಣದಲ್ಲಿ ಉಡಿoss ಇಟಿಡಿoಟmeಟಿಣ ಖಚಿಣio ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ್ತಿದೆ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತುಮಕೂರಿನಲ್ಲಿ 2010ರಲ್ಲಿ ಪ್ರಾದೇಶಿಕ ಕೇಂದ್ರವನ್ನು ಸ್ಧಾಪಿಸುವುದರ ಮೂಲಕ ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಸದರಿ ಕೇಂದ್ರವು 2018ರಲ್ಲಿ ತುಮಕೂರಿನಲ್ಲಿ ಸ್ವಂತ ಕಟ್ಟಡ ಹೊಂದಿದ್ದು, ಈ ಕಟ್ಟಡ ಮೂರು ಅಂತಸ್ತು ಇದ್ದು, 13 ಉಪನ್ಯಾಸ ಕೊಠಡಿಗಳನ್ನು ಹಾಗೂ ಇತರೆ ಸೌಲಭ್ಯಗಳನ್ನು ಒಳಕೊಂಡಿದ್ದು ಮತ್ತು ಈ ಕಛೇರಿಯಲ್ಲಿ ನುರಿತ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ಕರಾಮುವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತಿದೆ.
ಈ ಸುವರ್ಣ ಅವಕಾಶವನ್ನು ತುಮಕೂರು ಜಿಲ್ಲಾ ವ್ಯಾಪ್ತಿಯ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾಸಕ್ತರು ಬಳಸಿಕೊಳ್ಳಲು ತಿಳಿಸಿದೆ. ವಿದ್ಯಾರ್ಥಿಗಳು ಮನೆಯಲ್ಲಿ ಅಥವಾ ಯಾವುದೇ ಕೆಲಸ ನಿರ್ವಹಿಸಿಕೊಂಡು ಕಾಲೇಜುಗಳಿಗೆ ಹೋಗದೆ ಕರಾಮುವಿಯ ಮೂಲಕ ಯುಜಿಸಿ ಅನುಮೋದಿತ ಕೋರ್ಸ್‍ಗಳಲ್ಲಿ ಪದವಿಯನ್ನು ಪಡೆಯಬಹುದು.

(Visited 1 times, 1 visits today)