ಬೆಂಗಳೂರು
ಯಾವುದೇ ಸಂಘಟನೆ ಆಗಿರಲಿ ಸರಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬೆಳಂಬೆಳಗ್ಗೆ ದೇಶದೆಲ್ಲೆಡೆ ವಿವಿದ ರಾಜಗಳಲ್ಲಿ ದಾಳಿ ಮಾಡಿದ್ದು,100ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು
ಕಾಂಗ್ರೆಸ್ ಪಕ್ಷದ ನಿಲುವು ಯಾವಾಗಲೂ ಒಂದೇ ಆಗಿದೆ. ಕಾಲ ಕಾಲಕ್ಕೆ ಪಕ್ಷದ ನಿಲುವು ಬದಲಾಗುವುದಿಲ್ಲ. ಬಜರಂಗ ದಳ, ಪಿಎಫ್ ಐ ಎಸ್ ಡಿ ಯಾವುದೇ ಸಂಘಟನೆ ಇರಲಿ ಸೂಕ್ತ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಇಂತಹ ಸಂಘಟನೆ ಬ್ಯಾನ್ ಮಾಡಿ ಎಂದು ನಾವೇ ಹೇಳಿದ್ದೇವೆ. ಅದರೆ ಸಂಘಟನೆ ಬ್ಯಾನ್ ಮಾಡಲು ಸರಕಾರವೇ ಸಿದ್ದವಿಲ್ಲ. ಎಲ್ಲಾ ಸಂಘಟನೆಗಳನ್ನನಿಷೇದ ಮಾಡಲು ನಾವು ಬೆಂಬಲ ನೀಡುತ್ತೇವೆ ಎಂದು ಎಂ.ಬಿ ಪಾಟೀಲ್ ಸಲಹೆ ನೀಡಿದರು.
(Visited 1 times, 1 visits today)