ತುಮಕೂರು:
ಕೊಲ್ಕಾರಿಕೆ ಜಮೀನಿನ ಹಕ್ಕಿನ ಕುರಿತು ನ್ಯಾಯಾಯದಲ್ಲಿ ಕೇಸು
ವಿಚಾರಣೆ ಹಂತದಲ್ಲಿರುವಾಗ, ತುಮಕೂರು ತಹಶೀಲ್ದಾರರು,ಕೆಲವೇ
ಮಂದಿಯ ಹೆಸರಿಗೆ ಪಹಣಿ ಕೂರಿಸಿ, ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು
ಆರೋಪಿಸಿ, ಇಂದು ತುಮಕೂರು ನಗರದ ಎನ್.ಆರ್.ಕಾಲೋನಿ ಮೂಲಪುರುಷ
ಕುಳುವಾಡಿ ವಂಶಸ್ಥರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ
ಸಲ್ಲಿಸಿದರು.
ನಗರದ ಎನ್.ಆರ್.ಕಾಲೋನಿಯ ಮೂಲಪುರುಷ ಕುಳುವಾಡಿ ವಂಶಸ್ಥರಾದ
ರಾಮ,ಲಕ್ಕ, ಪಠಾಣ್ ಅವರುಗಳಿಗೆ ತುಮಕೂರು ಕಸಭಾ ಸರ್ವೆ ನಂಬರ್ 8ರ
ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಬಾಗ 4.18 ಗುಂಟೆ ಹಾಗು ಸರ್ವೆ ನಂಬರ್ 91-92ರ
ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಸುಮಾರು 30 ಗುಂಟೆ ಜಮೀನು ಇದ್ದು, ಇಂದು
ಲಕ್ಷಾಂತರ ರೂ ಬೆಲೆ ಬಾಳುತ್ತಿವೆ.ಸದರಿ ಜಮೀನಿನ ಹಕ್ಕಿಗಾಗಿ ಮೇಲಿನ ಮೂರು
ಕುಟುಂಬಗಳಿಗೆ ಸೇರಿದ ಸುಮಾರು 60-70 ಜನರು ನ್ಯಾಯಾಲಯದಲ್ಲಿ ದಾವೆ ಹೂಡಿ,
ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ ಎಂದರು.
ಕುಳುವಾಡಿಕೆ ಆಸ್ತಿಯ ಹಕ್ಕು ಸ್ಥಾಪಿಸುವ ಸಂಬಂಧ ನ್ಯಾಯಾಲಯದಲ್ಲಿ ಕೇಸು
ಇರುವಾಗಲೇ ತುಮಕೂರು ತಾಲೂಕು ತಹಶೀಲ್ದಾರರವರು ಮೂಲ
ಪುರುಷರ ಕುಟುಂಬಕ್ಕೆ ಸೇರಿದ ರಾಮಚಂದ್ರ ಬಿನ್. ಲೇಟ್ ಗಂಗಯ್ಯ,
ಶೆಟ್ಟಾಳಯ್ಯ ಬಿನ್.ಲೇಟ್ ಚಿಕ್ಕಹನುಮಯ್ಯ ಮತ್ತು ರಾಮಾಂಜೀನಯ್ಯ ಬಿನ್
ಲೇಟ್ ಪಠಾಣಯ್ಯ ಎಂಬುವರ ಹೆಸರಿಗೆ ಸದರಿ ಜಮೀನನ ಪಹಣಿ
ನಮೂದಿಸಿ,ಉಳಿದವರನ್ನು ಕೈಬಿಟ್ಟಿದ್ದಾರೆ.ಇದರ ಹಿಂದೆ ಲಕ್ಷಾಂತರ ರೂ
ಅವ್ಯವಹಾರ ನಡೆದಿದೆ.ಆದ್ದರಿಂದ ಸದರಿ ಪ್ರಕರಣವನ್ನು ತನಿಖೆಗೆ ಒಳಪಡಿಸಿ,
ಮೂಲವಾರಸುದಾರರ ಕುಟುಂಬದಲ್ಲಿರುವ ಎಲ್ಲರ ಹೆಸರು ಪಹಣಿಯಲ್ಲಿ
ಬರುವಂತೆ ಮಾಡಬೇಕೆಂಬುದು ನಮ್ಮ ಹೋರಾಟವಾಗಿದೆ ಎಂಬುದು ಪ್ರತಿಭಟನಾ
ನಿರತರ ಪರವಾಗಿ ದಲಿತ ಮುಖಂಡ ಪಿ.ಎನ್.ರಾಮಯ್ಯ ತಿಳಿಸಿದರು.
ಸದರಿ ಜಮೀನನ್ನು ಕಳಬಳಿಸಲ ಕೆಲವರು ಅಧಿಕಾರಿಗಳೊಂದಿಗೆ ಸೇರಿ ಹುನ್ನಾರ
ನಡೆಸಿರುವ ಬಗ್ಗೆ ಈಗಾಗಲೇ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ.
ಅಲ್ಲದೆ ತಹಶೀಲ್ದಾರರ ಆದೇಶದ ವಿರುದ್ದ ಈ ಹಿಂದಿನ ಜಿಲ್ಲಾಧಿಕಾರಿಗಳಾದ ರಾಕೇಶ್
ಕುಮಾರ್ ಅವರಿಗೆ ದೂರು ಸಲ್ಲಿಸಿದ ಸಂದರ್ಭದಲ್ಲಿ ಮೂಲ ಕುಟುಂಬಸ್ಥರ
ವಂಶವೃಕ್ಷ ಪಡೆದು ಎಲ್ಲರ ಹೆಸರಿಗೆ ಪಹಣಿ ಕೂರಿಸುವಂತೆ ಸೂಚನೆ
ನೀಡಿದ್ದರೂ ತಹಶೀಲ್ದಾರ್ ಅವರು ಮೇಲಾಧಿಕಾರಿಗಳ ಆದೇಶವನ್ನು
ನಿರ್ಲಕ್ಷಿಸಿರುವುದು ಕಂಡುಬಂದಿದೆ.ಹಾಗಾಗಿ ನ್ಯಾಯಾಲಯದಲ್ಲಿ ಕೇಸು
ಇತ್ಯರ್ಥವಾಗುವವರೆಗು ಸರ್ವೆ ನಂ.8 ಮತ್ತು 91-92ರಲ್ಲಿ ಕುಳುವಾಡಿಕೆಯ
ಮೂಲಪುರುಷರ ಹೆಸರೇ ಪಹಣಿಯಲ್ಲಿ ನಮೂದಾಗಬೇಕೆಂಬುದು ಅವರ
ಕುಟುಂಬಸ್ತರ ಒತ್ತಾಯವಾಗಿದೆ. ಎಲ್ಲಿಯವರೆಗೂ ಪಹಣಿಯಲ್ಲಿ ಎಲ್ಲರ ಹೆಸರು
ನಮೂದಾಗುವುದಿಲ್ಲವೊ ಅಲ್ಲಿಯ ವರೆಗೆ ತಹಶೀಲ್ದಾರ್‍ರ ವಿರುದ್ದ ಪ್ರತಿಭಟನೆ
ನಡೆಸುವುದಾಗಿ ಪಿ.ಎನ್.ರಾಮಯ್ಯ ತಿಳಿಸಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ
ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಕುಳುವಾಡಿ ವಂಶಸ್ಥರಾದ
ಲಕ್ಷ್ಮಿನಾರಾಯಣ್,ಸೋಮಶೇಖರ್,ನರಸಿಂಹಮೂರ್ತಿ,ಚಂದ್ರಶೇಖರ್,ಗಂಗಮ
್ಮ,ಚಿಕ್ಕಮ್ಮ,ಅಂಜನೇಯ್ಯ,ಸಂಜೀವಯ್ಯ, ಹನುಮಂತ, ಮಂಜುನಾಥ್ ಸೇರಿದಂತೆ
ಹಲವರು ಭಾಗವಹಿಸಿದ್ದರು.