ತುಮಕೂರು
ನಗರದ ಎಸ್.ಐ.ಟಿ. ಮುಖ್ಯರಸ್ತೆಯ ಸಿದ್ದೇಶ್ವರ ಕನ್ವೆಷನ್ ಹಾಲ್ ಬಳಿ ಇರುವ ಶ್ರೀವಿನಾಯಕ ಯೂತ್ ಆಸೋಸಿಯೇಷನ್ ವತಿಯಿಂದ ಹಸಿರು ತುಮಕೂರಿಗಾಗಿ ಓಟ ಎಂಬ 6ಕಿ.ಮಿ.ಗಳ ಮುಕ್ತ ಆಹ್ವಾನಿತ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು.
ಪುರುಷರು,ಮಹಿಳೆಯರು,ಬಾಲಕರು, ಬಾಲಕಿಯರು ಈ ನಾಲ್ಕು ವಿಭಾಗಗಳಲ್ಲಿ ನಡೆದ 6 ಕಿ.ಮಿ.ಗಳ ಮ್ಯಾರಥಾನ್ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಪೂರ್ವಾಡ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾಜಿ ಮಂತ್ರಿ ಹಾಗೂ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ ಜೊತೆಗಿದ್ದರು.
ಎಸ್.ಐ.ಟಿಯ ಸಿದ್ದೇಶ್ವರ ಕನ್ವೆಷನ್ ಹಾಲ್ ಮುಂಭಾಗದ ಆರಂಭವಾದ ಮ್ಯಾರಥಾನ್ ಓಟ, ಗಂಗೋತ್ರಿ ನಗರ ಮುಖ್ಯರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಭದ್ರಮ್ಮ ವೃತ್ತ,ಡಾ.ರಾಧಾಕೃಷ್ಣ ರಸ್ತೆ, ಎಸ್.ಎಸ್.ಪುರಂ ಮುಖ್ಯರಸ್ತೆ ಮೂಲಕ ಹಾದು ಸಿದ್ದೇಶ್ವರ ಕನ್ವೆಷನ್ ಹಾಲ್ ಬಳಿ ಮುಕ್ತಾಯಗೊಂಡಿತ್ತು. 250ಕ್ಕೂ ಹೆಚ್ಚು ವಿವಿಧ ವಯೋಮಾನದ ಓಟಗಾರರು ಭಾಗವಹಿಸಿದ್ದ ಓಟದಲ್ಲಿ ನಾಲ್ಕು ವಿಭಾಗದಲ್ಲಿ ಮೊದಲು ಮೂರು ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಹಸಿರು ತುಮಕೂರಿಗಾಗಿ ಓಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಶ್ರೀದೇವಿ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಆರ್.ಹುಲಿನಾಯ್ಕರ್,ಕಳೆದ 13 ವರ್ಷಗಳಿಂದ ಶ್ರೀವಿನಾಯಕ ಯೂತ ಅಸೋಸಿಯೇಷನ್ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿ, ಹಲವಾರು ಸಾಂಸ್ಕøತಿಕ,ಕ್ರೀಡಾ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನರಂಜನೆಯ ಜೊತೆಗೆ, ಕ್ರೀಡೆ, ಸಾಂಸ್ಕøತಿಕ ಪ್ರತಿಭೆಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ.ಕಳೆದ ಎರಡು ವರ್ಷಗಳ ಕಾಲ ಕೋರೋನದಿಂದಾಗಿ ಯಾವುದೇ ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ.ನಿಜವಾಗಿಯೂ ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಕೋರೋನ ತೋರಿಸಿಕೊಟ್ಟಿದೆ. ಹಾಗಾಗಿ ಎಲ್ಲರೂ ಅದರಲ್ಲಿಯೂ ಯುವಜನರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕೆಂದು ಸಲಹೆ ನೀಡಿದರು.
ಮಹಾನಗರಪಾಲಿಕೆ 15ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್ ಮಾತನಾಡಿ,ಕೋರೋನ ಎರಡು ವರ್ಷಗಳ ಕಾಲ ನಮ್ಮ ಕ್ರೀಡಾ, ಸಾಂಸ್ಕøತಿಕ ಕಾರ್ಯಕ್ರಮಗಳ ಮೇಲೆ ಕರಿನೆರಳಾಗಿತ್ತು.ಮಕ್ಕಳು ಕ್ರೀಡೆಯನ್ನು ಬಿಟ್ಟು ಮೊಬೈಲ್ಗೆ ದಾಸರಾಗಿದ್ದರು.ಇಂದು ಮತ್ತು ಕ್ರೀಡಾಚಟುವಟಿಕೆಗಳತ್ತ ಗಮನಹರಿಸುತ್ತಿರುವುದು ಉತ್ತಮ ಬೆಳೆವಣಿಗೆ ಯಾಗಿದೆ.ಚಿಕ್ಕಮಕ್ಕಳ ಪೋಷಕರು ಬೆಳಗಿನ ಜಾವವೇ ಉತ್ಸಾಹದಿಂದ ಪಾಲ್ಗೊಂಡಿರುವುದು ನಿಜಕ್ಕೂ ಸಂತೋಷ ಪಡುವಂತಹ ವಿಚಾರ. ಕ್ರೀಡಾಚಟುವಟಿಕೆಗಳು ಹೀಗೆಯೇ ಮುಂದುವರೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ರವೀಶ್ ಮಾತನಾಡಿ,ಇಂದಿನ ವೇಗದ ಯುಗದಲ್ಲಿ ಜನಸಾಮಾನ್ಯರು, ಅದರಲ್ಲಿಯೂ ಯುವಜನರು ದೈಹಿಕ ದಾಡ್ಯತೆಯನ್ನು (ಪಿಸಿಕಲ್ ಪಿಟ್ನೇಸ್)ಕಾಪಾಡಿಕೊಳ್ಳುವದು ಅತಿ ಮುಖ್ಯವಾಗಿದೆ.ಕನಿಷ್ಠ ದೈಹಿಕ ಕಸರತ್ತಿನ ಮೂಲಕ ಉತ್ತಮ ಆರೋಗ್ಯ ಹೊಂದುವಂತೆ ಕರೆ ನೀಡಿದರು.
ಶ್ರೀವಿನಾಯಕ ಯೂತ್ ಅಸೋಸಿಯೇಷನ್ ಹಸಿರು ತುಮಕೂರಿಗಾಗಿ ಓಟ ಎಂಬ ಹೆಸರಿನಲ್ಲಿ ಏರ್ಪಡಿಸಿದ್ದ 6 ಕಿ.ಮಿ.ಗಳ ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬೆಂಗಳೂರು ವಿವಿಯ ಗೋವಿಂದರಾಜು ಹೆಚ್, ಕರ್ನಾಟಕ ಪೊಲೀಸ್ನ ಗರುಪ್ರಸಾದ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿರಾದ ಮಂಜುನಾಥ್.ಎಂ.ಕೆ.,ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಪೊಲೀಸ್ನ ತೇಜಸ್ವಿ, ಕುಣಿಗಲ್ ಪ್ರಥಮದರ್ಜೆ ಕಾಲೇಜಿನ ಅನೂಷ,ಎಸ್.ಎ, ಪಲ್ಲವಿ.ಕೆ.ಜಿ,, ಬಾಲಕರ ವಿಭಾಗದಲ್ಲಿ ಸಿದ್ದಗಂಗಾ ಮಠದ ಗಣೇಶ್, ಆನಂದಗೌಡ, ನಾಗರಾಜ, ಬಾಲಕಿಯರ ವಿಭಾಗದಲ್ಲಿ ಕ್ಲಾರೆನ್ಸ್ ಇಂಗ್ಲಿಷ್ ಶಾಲೆಯ ತೇಜಸ್ವಿ, ವಿದ್ಯಾಮಾನಸ ವಿದ್ಯಾಲಯದ ಪ್ರೂರ್ಣ ಪ್ರಜ್ಞಾ ಮತ್ತು ಲಿಖಿತ ಅವರುಗಳು ಕ್ರಮವಾಗಿ ಮೊದಲು ಮೂರು ಸ್ಥಾನಗಳನ್ನು ಪಡೆಯುವ ಮೂಲಕ ನಗದು ಪುರಸ್ಕಾರಕ್ಕೆ ಭಾಜನರಾದರು.
ಹಸಿರು ತುಮಕೂರಿಗಾಗಿ ಒಟ ಮ್ಯಾರಥಾನ್ ಓಟದ ತೀರ್ಪುಗಾರರಾಗಿ ಡಾ.ರವೀಶ್, ಗುರುಪ್ರಸಾದ್,ಪ್ರದೀಪ್, ವಿನಯ್, ದಿಲೀಪ್,ಪ್ರಕಾಶ್ ಅವರುಗಳು ಭಾಗವಹಿಸಿದ್ದರು.ವೇದಿಕೆಯಲ್ಲಿ ಕಾರ್ಯಕ್ರಮದ ಆಯೋಜಕರಾದ ಚಂದನ್ ಕುಮಾರ್, ವಿಶ್ವನಾಥ್,ಕಾರ್ತಿಕಗೌಡ,ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ,ಚಂದ್ರಕಲಾ ಪುಟ್ಟರಾಜು,ಲೋಹಿತ್, ಸಂದೀಪ್, ದೀಪಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೆ ಪ್ರಶಂಶನಾ ಪತ್ರ ನೀಡಲಾಯಿತು.