ತುಮಕೂರು
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟವು ಪರಿಶಿಷ್ಟ ಜಾತಿಗೆ ಶೇ. 15 ರಿಂದ 17 ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.3 ರಿಂದ 7ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ನಿರ್ಣಯವನ್ನು ಬಿಜೆಪಿ ಜಿಲ್ಲಾ ಎಸ್.ಟಿ.ಮೋರ್ಚಾದ ಅಧ್ಯಕ್ಷ ಜಿ.ಕೆ.ಬಸವರಾಜು ಸ್ವಾಗತಿಸಿ, ಐತಿಹಾಸಿಕ ಕ್ರಮವೆಂದಿದ್ದಾರೆ.
ಇವರು ಇಂದು ತುಮಕೂರಿನ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಜೀರವರ ವೃತ್ತದಲ್ಲಿ ಬಿಜೆಪಿ ಎಸ್.ಸಿ. ಮತ್ತು ಎಸ್.ಟಿ ಮೋರ್ಚಾ ಘಟಕಗಳು ರಾಜ್ಯ ಸರ್ಕಾರದ ನಿರ್ಣಯವನ್ನು ಅಭಿನಂದಿಸಿ ನಡೆಸಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಸಂಧರ್ಭದಲ್ಲಿ ಮಾತನಾಡುತ್ತಾ, ನ್ಯಾಯಮೂರ್ತಿ ನಾಗಮೋಹನ್ದಾಸ್ರವರು ನೀಡಿದ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿದೆ. ರಾಜ್ಯದಲ್ಲಿ ಪರಿಶಿಷ್ಟ/ವರ್ಗದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸುಧೀರ್ಘ ಹೋರಾಟ ಮತ್ತು ಮನವಿಗಳಿಗೆ ಸ್ಪಂದಿಸಿ, ಮೀಸಲಾತಿಯನ್ನು ಪರಿಶಿಷ್ಟ ಜಾತಿಯವರಿಗೆ ಶೇ.2ರಷ್ಟು ಮತ್ತು ಪರಿಶಿಷ್ಟ ವರ್ಗದವರಿಗೆ ಶೇ. 4ರಷ್ಟು ಪ್ರಮಾಣವನ್ನು ಹೆಚ್ಚಿಸಿರುವುದರಿಂದ ಜನಾಂಗಗಳಿಗೆ ಸರ್ವ ರೀತಿಯ ಸವಲತ್ತು, ಅನುದಾನದ ಪ್ರಮಾಣಗಳು ಹೆಚ್ಚಿ ಅಭಿವೃದ್ಧಿಗೆ ಸಹಕಾರಿಯಾಗಳಿದೆ ಎಂದರು.
ಈ ಸಂಧರ್ಭದಲ್ಲಿ ಮಾತನಾಡಿದ ತುಮಕೂರು ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯರು ಮತ್ತು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಜಯ್ ಕುಮಾರ್ ಮತ್ತು ತುಮಕೂರು ನಗರ ಎಸ್.ಟಿ.ಮೋರ್ಚಾ ಅಧ್ಯಕ್ಷ ಬೊಂಬು ಮೋಹನ್ರವರುಗಳು ಸರ್ಕಾರದ ತೀರ್ಮಾನವನ್ನು ಪ್ರಶಂಶಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಭೈರಪ್ಪ, ಎಸ್.ಟಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸಣ್ಣರಂಗಯ್ಯ.ಎಂ, ಕಾರ್ಯದರ್ಶಿ ಕುಮಾರ್, ರಾಕೇಶ್, ಜಿ.ಸ್ವಾಮಿ ಖಜಾಂಚಿ ಧನುಷ್, ನಗರ ಉಪಾಧ್ಯಕ್ಷೆ ರತ್ನಮ್ಮ, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ದಯಾನಂದ್, ಕಾರ್ಯದರ್ಶಿ ಮಂಜು, ಜೆ.ಮಹೇಶ್, ಮಂಜುನಾಥ್, ದಯಾನಂದ್, ಖಜಾಂಚಿ ರಂಗಪ್ಪ, ತುಮಕೂರು ಗ್ರಾಮಾಂತರ ಅಧ್ಯಕ್ಷ ನಟರಾಜು, ಪ್ರಧಾನ ಕಾರ್ಯದರ್ಶಿ ಕಾಂತರಾಜು, ನಟರಾಜು, ಗುಬ್ಬಿ ಮಂಡಲ ಪ್ರಧಾನ ಕಾರ್ಯದರ್ಶಿ ಚೇತನ್ ನಾಯಕ್, ಖಂಜಾಚಿ ಮಂಜುನಾಥ್, ತುಮಕೂರು ನಗರ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಸಿದ್ಧಗಂಗಯ್ಯ, ವಕ್ತಾರ ಕೆ.ಸಿ.ಮಹೇಶ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕಿ ಶಕುಂತಲ ನಟರಾಜ್, ನಗರ ಅಧ್ಯಕ್ಷ ಹನುಮಂತರಾಜು.ಹೆಚ್.ಟಿ, ಪ್ರಧಾನ ಕಾರ್ಯದರ್ಶಿ ರಾಜೀವ್ ಕೃಷ್ಣಮೂರ್ತಿ, ರೈತಮೋರ್ಚಾ ಜಿಲ್ಲಾ ಕಾರ್ಯದರ್ಶಿ ಟಿ.ಶೈಲಶ್ರೀ, ಜಿಲ್ಲಾ ವಕ್ರ್ಫ್ ಬೋರ್ಡ್ ಉಪಾಧ್ಯಕ್ಷ ಶಬೀರ್ ಆಹಮ್ಮದ್, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್ ಮುಂತಾದವರು ಭಾಗವಹಿಸಿದ್ದರು.