ತುಮಕೂರು


ಪ್ರಸನ್ನನಂದ ಸ್ವಾಮೀಜಿಗಳು 240 ದಿನಗಳಿಂದ ಸುದೀರ್ಘ ಕಾಲದ ಅಹೋರಾತ್ರಿ ದರಣಿ ನೆಡೆಸುತ್ತಿದ್ದಾರೆ, ಆದರೆ ಸರ್ಕಾರವು ಇಲ್ಲಿಯ ತನಕ ಈ ನಮ್ಮ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಿಲ್ಲ. ಆದ ಕಾರಣ ನಮ್ಮ ಎಲ್ಲಾ ಎಸ್.ಸಿ./ಎಸ್.ಟಿ. ಸ್ವಾಮೀಜಿಗಳು ದಿನಾಂಕ 09-10-2022 ರಂದು ನಡೆಯಲಿರುವ ಮಹರ್ಷಿ ವಾಲ್ವೀಕಿ ಜಯಂತಿಯಂದು ರಾಜ್ಯದ ಎಲ್ಲಾ ಎಸ್.ಸಿ/ಎಸ್.ಟಿ ಬಂಧುಗಳು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಬೇಕೆಂದು ತೀರ್ಮಾನಿಸಿರುತ್ತಾರೆ.
ಈ ದಿನಾಂಕದೊಳಗೆ ಸರ್ಕಾರವು ಸಕಾರಾತ್ಮಕವಾಗಿ ನಿರ್ಧಾರ ಕೈಗೊಂಡು ಮೀಸಲಾತಿ ಹೆಚ್ಚಳ ಮಾಡುವ ಆದೇಶ ಮಾಡಿದ್ದಲ್ಲಿ, ಆ ದಿನಾಂಕದಂದು ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕೆಂದು ಎಸ್.ಸಿ./ಎಸ್.ಟಿ ಸ್ವಾಮೀಜಿಗಳು ನಿರ್ಧರಿಸಿದ್ದಾರೆ. ಪೂಜ್ಯ ಸ್ವಾಮೀಜಿಗಳ ನಿರ್ಣಯವನ್ನು ನಮ್ಮ ಬಹುಜನ ಸಮಾಜ ಪಾರ್ಟಿ ಸಂಪೂರ್ಣವಾಗಿ ಬೆಂಬಲಿಸಿ ದಿನಾಂಕ 09-10-2022 ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೀವಿ. ಈ ಸಮಾವೇಶದಲ್ಲಿ ಬಾಂಸೆಪ್, ಡಿಎಸ್4, ಬಿ.ಎಸ್.ಪಿ. ಯ ಸಂಸ್ಥಾಪಕರಾದ ಮಾನ್ಯ ಕಾನ್ಷಿರಾಂಜೀ ರವರ ಪರಿನಿಬ್ಬಾಣ ದಿನವನ್ನು ಆಚರಿಸಲಾಗುತ್ತದೆ. ಈ ವಿಷಯದಲ್ಲಿ ಬೆಂಗಳೂರಿನಲ್ಲಿ ನೆಡೆಯುವ ಸ್ವಾಭಿಮಾನಿ ಎಸ್.ಸಿ/ಎಸ್.ಟಿ ಸಂಘಟನೆಗಳು ಸಮಾವೇಶಕ್ಕೆ ನಮ್ಮ ಜಿಲ್ಲೆಯಿಂದ 5000 ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಆದ ಕಾರಣ ಮಾಧ್ಯಮ ಮಿತ್ರರಾದ ತಾವುಗಳು ಸಾವಿರಾರು ವರ್ಷಗಳಿಂದ ಬೆಂದು ಹೋಗಿರುವ ಈ ಜನಾಂಗದ ವಿಷಯವನ್ನು ಪ್ರಕಟಿಸಿ ಕೃಪೆ ತೋರಬೇಕೆಂದು ಬಿ.ಎಸ್.ಪಿ.ಯು ಮನವಿ ಮಾಡಿಕೊಳ್ಳುತ್ತದೆ. ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿದವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ತುಮಕೂರು ಉಸ್ತುವಾರಿಗಳು ಗುರುಮೂರ್ತಿ ಹಾಗೂ ಶೂಲಯ್ಯ, ಜಿಲ್ಲಾ ಅಧ್ಯಕ್ಷರು ರಾಜಸಿಂಹ ಜೆ.ಎನ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ಜೆ.ಸಿ., ನಗರಾಧ್ಯಕ್ಷರು ದಿನೇಶ್‍ಬಾಬು ಹಾಗೂ ಸಿರಾ ತಾಲ್ಲೂಕು ಅಧ್ಯಕ್ಷರು ವೀರಕ್ಯಾತಯ್ಯ, ಮಧುಗಿರಿ ತಾಲ್ಲೂಕು ಅಧ್ಯಕ್ಷರು ಗೋಪಾಲ್ ಎ.ಎಸ್., ಚಿಕ್ಕನಾಯಕನಹಳ್ಳಿ ಉಸ್ತುವಾರಿಗಳು ನಾಗೇಂದ್ರ, ರಂಗಯ್ಯ, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

(Visited 1 times, 1 visits today)