ತುಮಕೂರು


ನಗರದ ಶ್ರೀರಾಜರಾಜೇಶ್ವರಿ ನೃತ್ಯ ಕಲಾಮಂದಿರ 60ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನೂಪುರ ಚರಣ-2022 ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ನಟರಾಜ ಮೂರ್ತಿಗೆ ಪೂಜೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಮೈಸೂರು ವಿವಿಯ ಫೈನ್ ಆರ್ಟ್ ವಿಭಾಗ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಕರ್ನಾಟಕ ಕಲಾಶ್ರೀ ಡಾ.ಕೆ.ಕುಮಾರ್,ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಸಿಬಂತಿ ಪದ್ಮನಾಭ.ಕೆ.ವಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರು ಹಾಗೂ ಯಕ್ಷದೀವಿಗೆ(ರಿ) ಅಧ್ಯಕ್ಷರಾದ ಶ್ರೀಮತಿ ಆರತಿ ಪಟ್ರಮೇ,ಶಿವಶಕ್ತಿ ನೃತ್ಯಕೇಂದ್ರ ಬೆಂಗಳೂರು ಇದರ ಅಧ್ಯಕ್ಷರು,ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಗುಣವತಿ ಪ್ರಭಾಕರ್,ನಾಟ್ಯಶ್ರೀ ಕೆ.ಎಂ.ರಾಮನ್ ಅವರ ಶಿಷ್ಯೆ.ಭರತನಾಟ್ಯ ಕಲಾವಿದೆ ಶ್ರೀಮತಿ ಉಪಾಪ್ರಿಯೆ ಹಾಗೂ ಪ್ರಾಚೀನ ಕಾವ್ಯಗಳ ಪ್ರವಚನಕಾರರು ಮತ್ತು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷರಾದ ಟಿ.ಮುರುಳಿಕೃಷ್ಣಪ್ಪ ಅವರುಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕøತ ಕೆ.ಎಂ.ರಾಮನ್ ಮತ್ತು ದೇವಕಿ ರಾಮನ್ ಅವರು 1962 ರಲ್ಲಿ ಸ್ಥಾಪಿಸಿದ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕಲಾ ಮಂದಿರ ಅರವತ್ತು ವಸಂತಗಳನ್ನು ಪೂರೈಸಿದ್ದು,ಇಡೀ ಕುಟುಂಬವೇ ನೃತ್ಯಕ್ಕೆ ತಮನ್ನು ತಾವು ಅರ್ಪಿಸಿಕೊಂಡಿದ್ದಾರೆ.ಅಲ್ಲದೆ ಸಾವಿರಾರು ನೃತ್ಯಪಟುಗಳು ಇಲ್ಲಿಂದ ಕಲಿತು, ದೇಶ ವಿದೇಶಗಳಲ್ಲಿ ನೆಲೆಸಿ,ಭರತನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ.
ಶ್ರೀರಾಜರಾಜೇಶ್ವರಿ ನೃತ್ಯ ಕಲಾಮಂದಿರದ 60ನೇ ನೂಪುರ ಚರಣದÀ ಅಂಗವಾಗಿ ಕಲಾಮಂದಿರದಲ್ಲಿ ನೃತ್ಯಾಭ್ಯಾಸದಲ್ಲಿ ತೊಡಗಿರುವ ಕಿರಿಯ,ಹಿರಿಯ,ವಿದ್ವತ್ ವಿಧ್ಯಾರ್ಥಿಗಳು ವಿದ್ವಾನ್ ಹರೀಶ್ ರಾಮನ್ ಅವರ ನೃತ್ಯ ಸಂಯೋಜನೆಯಲ್ಲಿ ಭರತನಾಟ್ಯ ಪ್ರದರ್ಶನ ನೀಡಿದರು.ಪಕ್ಕವಾದ್ಯದಲ್ಲಿ ನಟವಾಂಗು ವಿದ್ವಾನ್ ಹರೀಶ್ ರಾಮನ್,ಹಾಡುಗಾರಿಕೆಯಲ್ಲಿ ಶ್ರೀ ಮತಿ ಇಂದು ಶಂಕರ್ ಹಾಗು ಶ್ರೀ ಮತಿ ದೀಪಾ ಹರೀಶ್,ಮೃದಂಗದಲ್ಲಿ ವಿದ್ವಾನ್ ಬೆಟ್ಟ ವೆಂಕಟೇಶ್,ಕೊಳಲು ವಿದ್ವಾನ್ ಕೆ.ಎಸ್.ಗಣೇಶ್,ಪಿಟೀಲ್ ಪಿ.ಎಸ್.ಪಸನ್ನ ಕುಮಾರ್, ವರ್ಣಾಂಲಕಾರ ಹರೀಶ್ ಇಳಂಗೋವನ್ ಮತ್ತು ತಂಡ ಸಾಥ್ ನೀಡಿದ್ದಾರೆ.

(Visited 1 times, 1 visits today)