ತುಮಕೂರು:

      ಇತ್ತೀಚಿನ ದಿನಗಳಲ್ಲಿ ರಾಗಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒತ್ತಡದ ಬದುಕಿನಿಂದ ಮಧುಮೇಹಿಗಳ ಸಂಖ್ಯೆ ಹೆಚ್ಚಾದಂತೆ ಸಿರಿಧಾನ್ಯವಾದ ರಾಗಿಯ ಮಹತ್ವವನ್ನು ಅರಿತು ಹೆಚ್ಚು ಜನರು ಬಳಸುತ್ತಿದ್ದಾರೆ ಎಂದು ಜೀವನ ಉತ್ತೇಜನಾಧಿಕಾರಿ ಗುರುದತ್ ತಿಳಿಸಿದರು.

      ತಾಲ್ಲೂಕಿನ ಸೋಪನಹಳ್ಳಿ ಗ್ರಾಮದ ರವಿಕುಮಾರ್ ಜಮೀನಿನಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಪ್ರಜಾ ಫೌಂಡೇಷನ್ ಮತ್ತು ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿವತಿಯಿಂದ ಏರ್ಪಡಿಸಿದ್ದ ನಾಟಿತಳಿ ರಾಗಿಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ತಳಿಗಳನ್ನು ರೈತರು ಅನ್ವೇಷಣೆ ಮಾಡುವ ಮೂಲಕ ಹೊಸ ತಳಿಗಳ ಕಂಡು ಹಿಡಿಯಬೇಕು. ರಾಗಿ ತಳಿಯು ಕಡಿಮೆ ಪ್ರಮಾಣದ ನೀರಿದ್ದರೂ ಬೆಳೆಯುತ್ತದೆ ಎಂಬುದು ವಿಶೇಷ. ಮಳೆ ನಿಯಮಿತವಾಗಿ ಸುರಿಯದಿದ್ದರೂ ಒಣ ಹವೆಯನ್ನು ತಡೆದುಕೊಂಡು ಬದುಕುಳಿಯುವ ಸಾಮರ್ಥ ನಾಟಿತಳಿಗಳಲ್ಲಿ ಇರುತ್ತದೆ ಎಂದರು.

      ಐಡಿಎಫ್ ಸಂಸ್ಥೆಯ ತಾಲ್ಲೂಕು ಸಂಯೋಜಕ ಕೆ.ಎಸ್.ಸುರೇಶ್ ಮಾತನಾಡಿ, ಐಡಿಎಫ್ ಸಂಸ್ಥೆಯು ಆರ್ಥಿಕ ಸೆರ್ಪಡೆ, ಜೀವನ ಉತ್ತೇಜನ, ಸಂಘಟನೆ ಮತ್ತು ಕೃಷಿ ಪರಿಕರಗಳನ್ನು ಎಲ್ಲ ಕೃಷಿಕ ಸಂಘದವರು ಪಡೆದುಕೊಳ್ಳಬೇಕು ಎಂದರು.

      ಕ್ಷೇತ್ರೋತ್ಸವದಲ್ಲಿ ಪ್ರಗತಿ ರೈತ ರವಿಕುಮಾರ್, ಗ್ರಾಪಂ ಮಾಜಿ ಸದಸ್ಯ ರವಿಕುಮಾರ್, ಗ್ರಾಮದ ಮುಖಂಡ ಮಹಾದೇವಯ್ಯ, ಜೀವನ ಉತ್ತೇಜನಾಧಿಕಾರಿ ಹರ್ಷಿತ, ವ್ಯವಸ್ಥಾಪಕ ಡಿ.ಲೋಕೇಶ್, ಕ್ಷೇತ್ರಾಧಿಕಾರಿಗಳಾದ ಸಿ.ಮೋಹನ್‍ಕುಮಾರ್, ಕೆ.ಮಧುಸೂಧನ್, ನರಸಿಂಹಮೂರ್ತಿ, ಬ್ಯಾಂಕ್ ವ್ಯವಹಾರ ಪ್ರತಿನಿಧಿ ಯಶೋದ, ಪ್ರಗತಿ ರೈತರು, ಕೃಷಿಕ ಸಂಘದವರು ಹಾಜರಿದ್ದರು.
 

(Visited 15 times, 1 visits today)