ತುಮಕೂರು:
ಇಹಲೋಕದ ಹಂಗು ತೊರೆದು ಸಾಗಿರುವ ಸಿದ್ದಗಂಗಾ ಶ್ರೀಗಳ ಕ್ರಿಯಾದಿಗಳು ಕಾರ್ಯ ಮಂಗಳವಾರ (ಜನವರಿ 22) ಸಂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಗುರುವಿನಂತೆ ಶಿಷ್ಯರ ಅಂತಿಮ ವಿಧಿ ವಿಧಾನ:
ತಮ್ಮ ಗುರು ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳಿಗೆ ಯಾವ ರೀತಿಯಲ್ಲಿ ಅಂತಿಮ ವಿಧಿ ವಿಧಾನ ಪೂರೈಸಲಾಗಿರುತ್ತದೋ ಅದೇ ರೀತಿಯಲ್ಲಿ ತಮ್ಮ ಕ್ರಿಯಾ ವಿಧಾನ ಮಾಡಬೇಕೆಂದು ಶ್ರೀಗಳು ಬರೆದಿಟ್ಟಿದ್ದು ಅದೇ ರೀತಿಯಲ್ಲಿ, ಅವರು ಇಚ್ಛೆಪಟ್ಟ ಜಾಗದಲ್ಲಿಯೇ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಕ್ರಿಯಾ ಸಮಾಧಿ ಕಾರ್ಯಗಳಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 15-20 ಶ್ರೀಗಳ ಸಮ್ಮುಖದಲ್ಲಿ ಕ್ರಿಯಾ ಸಮಾಧಿ ಕಾರ್ಯ ನೆರವೇರಲಿದೆ.
ತಮ್ಮ ಗುರು ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳ ರೀತಿಯಲ್ಲಿ ಅಂತಿಮ ವಿಧಿ ವಿಧಾನ ಪೂರೈಸಲಾಗಿರುತ್ತೋ ಅದೇ ರೀತಿಯಲ್ಲಿ ತಮ್ಮ ಕ್ರಿಯಾ ವಿಧಾನ ಮಾಡಬೇಕೆಂದು ಶ್ರೀಗಳು ಬರೆದಿಟ್ಟಿದ್ದು ಅದೇ ರೀತಿಯಲ್ಲಿ, ಅವರ ಸ್ವಯಿಚ್ಚೆಯಂತೆ ಅವರ ಇಷ್ಪ ಪಟ್ಟ ಜಾಗದಲ್ಲಿಯೇ ಅಂತಿಮ ವಿಧಿವಿಧಾನಗಳು ನಡೆಯಲಿವೆ.
ಕ್ರಿಯಾ ಸಮಾಧಿ ಕಾರ್ಯಗಳಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 15-20 ಶ್ರೀಗಳ ಸಮ್ಮುಖದಲ್ಲಿ ಕ್ರಿಯಾ ಸಮಾಧಿ ಕಾರ್ಯ ನೆರವೇರಲಿದೆ.
ಸಮಾಧಿ ಕಾರ್ಯಗಳಿಗೆ ಎಲ್ಲ ರೀತಿಯ ಸಿದ್ಧತೆ:
ವೀರಶೈವ ಕ್ರಿಯಾ ಸಮಾಧಿಯಲ್ಲಿ11 ಹೆಜ್ಜೆ ಗುಂಡಿ ತೊಡಲಾಗುತ್ತದೆ. 5 ಮೆಟ್ಟಿಲುಗಳನ್ನು ಮಾಡಲಾಗುತ್ತದೆ. ಅದರ ವಿರುದ್ಧ ಭಾಗದಲ್ಲಿ 3.5 ಅಡಿ ಮತ್ತೆ ಗೂಡು ತೋಡಿ ಅದರ ಸುತ್ತಲೂ ವಿಭೂತಗಳನ್ನು ಜೋಡಿಸಲಾಗುತ್ತದೆ. ನಂತರ ಆವರನ್ನು ಸಿದ್ದಾಸನ ರೂಪದಲ್ಲಿ ಕೂರಿಸಿ ಎರಡು ಕೈಗಳನ್ನು ಎದೆಯ ಸಲ್ಪ ಕೆಳ ಭಾಗದಲ್ಲಿ ಜೋಡಿಸಿ ಅಲ್ಲಿ ಅವರ ಇಷ್ಟ ಶಿವಲಿಂಗವನ್ನು ಇಟ್ಟು ಅದಕ್ಕೆ ಪಂಚಾಭಿಷೇಕ ಮಾಡಲಾಗುತ್ತದೆ. ಮತ್ತೆ ಪೂಜೆ ಮಾಡಿ ನಂತರ ದರ್ಶನ ಮಾಡಿಸಲಾಗುತ್ತದೆ.
15-20 ಶ್ರೀಗಳ ಸಮ್ಮುಖದಲ್ಲಿ ಕ್ರಿಯಾ ಸಮಾಧಿ:
ನಂತರ ಬಿಲ್ವ ಪತ್ರೆ ಹಾಗೂ ಓಂಕಾರ ತಿದ್ದಿರುವ ವಿಭೂತಿಗಳ ಮೂಲಕ ಸಂಪೂರ್ಣ ಮುಚ್ಚಲಾಗುತ್ತದೆ. ಗುಂಡಿಯ ಒಳ ಭಾಗದಲ್ಲಿ ಪೂಜೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಇಡಲಾಗುತ್ತದೆ. ಕೊನೆಯಲ್ಲಿ ಮರಳಿನಿಂದ ಮುಚ್ಚಲಾಗುತ್ತದೆ. ಆಮೇಲೆ ಅದರ ಮೇಲೆ ಲಿಂಗವಿಡುತ್ತಾರೆ ಅದನ್ನು ಸಿದ್ದೇಶ್ವರ ಲಿಂಗ ಎನ್ನುವರು ಅಥವಾ ಅವರದೇ ವಿಗ್ರಹವನ್ನೇ ಇಡಬಹುದಾಗಿದೆ. ಬಿಲ್ವ ಪತ್ರೆ ಹಾಗೂ ವಿಭೂತಿಯಿಂದಲೇ ಸಾಂಪ್ರದಾಯಿಕವಾಗಿ ಮುಚ್ಚಲಾಗುತ್ತದೆ. ಎಲ್ಲಾ ಪರಮ ಪೂಜ್ಯರು ವೇದ ಘೋಷಗಳ ಮೂಲಕ ಅಂತಿಮ ದರ್ಶನ ಪಡೆಯುವರು.
(Visited 91 times, 1 visits today)