ತುರುವೇಕೆರೆ:
ಜಿಲ್ಲಾತಂಬಾಕು ನಿಯಂತ್ರಣ ಕೋಶ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತುಮಕೂರು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ ತುರುವೇಕರೆ ಇವರುಗಳು ಜಂಟಿಯಾಗಿ ತಂಬಾಕು ನಿಯಂತ್ರಣ ಕಾರ್ಯಾಚರಣೆಯನ್ನು ಪಟ್ಟಣದಲ್ಲ್ಲಿ ಹಮ್ಮಿಕೊಂಡು ಅಂಗಡಿ ಮುಂಗಟ್ಟು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಿತ ಪ್ರದೇಶದಲ್ಲಿ ಧೂಮಪಾನ ಮಾಡುವುದು ಅಪರಾಧ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಲು ತಿಳಿಸಿದರಲ್ಲದೇ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದರು.
ಒಟ್ಟು 50 ಪ್ರಕರಣಗಳನ್ನು ದಾಖಲಿಸುವ ಮುಖೇನ ರೂ.4560 ಗಳನ್ನು ದಂಡದ ರೂಪದಲ್ಲಿ ವಸೂಲು ಮಾಡಲಾಯಿತು.ಸದರಿಕಾರ್ಯಾಚರಣೆಯಲ್ಲಿ ಜಿಲ್ಲಾ ಸಲಹೆಗಾರರಾದ ರವಿಪ್ರಕಾಶ್, ಎಂ.ಆರ್.ಪುಂಡಲೀಕ ಲಕಾಟಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಬಿ. ಚಂದ್ರಶೇಖರ್, ಎ.ಎಸ್.ಐ. ವೆಂಕಟೇಶ್ ಹಾಜರಿದ್ದರು.ಸದರಿ ಕಾರ್ಯಾಚರಣೆ ಮಾಡುವ ಮುಖೇನ ತುರುವೇಕೆರೆಯನ್ನು ತಂಬಾಕು ಮುಕ್ತ ಪ್ರದೇಶವಾಗಿ ಮಾರ್ಫಡಿಸಲು ಶ್ರಮಸುತ್ತಿರುವುದಾಗಿ ಜಿಲ್ಲಾ ಸಲಹೆಗಾರ ರವಿಪ್ರಕಾಶ್ ತಿಳಿಸಿದರಲ್ಲದೆ ಸಾರ್ವಜನಿಕರ ಸಹಕಾರ ಈ ಕಾರ್ಯಕ್ಕೆ ಅತಿ ಮುಖ್ಯವೆಂದು ತಿಳಿಸಿದರು.